ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಬಹುನಿರೀಕ್ಷಿತ “ಮದಗಜ” ಚಿತ್ರದ ಮುಹೂರ್ತಕ್ಕೆ ದಿನಾಂಕ ನಿಗದಿಯಾಗಿದೆ. ಯುವ ನಿರ್ದೇಶಕ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿರುವ ಮದಗಜ ಚಿತ್ರ ಇದೇ ಫೆಬ್ರವರಿ 21ರಂದು ಶಿವರಾತ್ರಿ ಹಬ್ಬದ ದಿನದಂದು  ಮುಹೂರ್ತ ಆಚರಿಸಿಕೊಳ್ಳುತ್ತಿದ್ದು ಅಂದಿನಿಂದಲೇ ಚಿತ್ರೀಕರಣ ಸಹ ಮಾಡುತ್ತಿದೆ. ಮದಗಜ ಚಿತ್ರ ಆರಂಭದ ದಿನಗಳಿಂದಲೂ  ಭಾರಿ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರಕ್ಕೆ ರಾಬರ್ಟ್ ಚಿತ್ರ ನಿರ್ಮಾಣ ಮಾಡುತ್ತಿರುವ ಉಮಾಪತಿ ಶ್ರೀನಿವಾಸ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಮದಗಜ ಚಿತ್ರದ ಮತ್ತೊಂದು ವಿಶೇಷ ಎಂದರೆ ಚಿತ್ರದ ಮೊದಲ ಭಾಗದ ಚಿತ್ರೀಕರಣ ವಾರಣಾಸಿಯಲ್ಲೇ ಆರಂಭವಾಗಲಿದೆ.

ಶ್ರೀಮುರಳಿ ಜಗಪತಿಬಾಬು, ಸಿತಾರಾ,  ಚಿಕ್ಕಣ್ಣ,  ಶಿವರಾಜ್ ಕೆಆರ್ ಪೇಟೆ ಸೇರಿದಂತೆ ಬಹು ತಾರಾಗಣ ಇರುವ ಮದಗಜ  ಚಿತ್ರಕ್ಕೆ ಅಯೋಗ್ಯ ಅಂತಹ ಸೂಪರ್ ಹಿಟ್ ಚಿತ್ರ ನಿರ್ದೇಶನ ಮಾಡಿದ್ದ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮದಗಜ ಚಿತ್ರವು ಈ  ಹಿಂದಿನಿಂದಲೂ ಸಹ ಸಾಕಷ್ಟು ಸುದ್ದಿ ಮಾಡಿತ್ತು,  ಚಿತ್ರದ ಟೈಟಲ್ ಬದಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದರೂ ಸಹ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಚಿತ್ರದ ಸ್ಕ್ರಿಪ್ಟ್ ಫೈನಲ್ ಮಾಡುವಲ್ಲಿ ನಿರತವಾಗಿದ್ದ ನಿರ್ದೇಶಕ S.ಮಹೇಶ್ ಕುಮಾರ್  ಇದೀಗ ಚಿತ್ರೀಕರಣ ಆರಂಭಿಸುವುದಕ್ಕೆ ಸಂಪೂರ್ಣ  ಸಿದ್ಧತೆ ಮಾಡಿಕೊಂಡಿದ್ದಾರೆ.

ಇನ್ನು ಮದಗಜ ಚಿತ್ರಕ್ಕೆ ಮಫ್ತಿ ಚಿತ್ರಕ್ಕೆ ಕ್ಯಾಮೆರಾಮನ್ ಆಗಿ ವರ್ಕ್ ಮಾಡಿದ್ದ ನವೀನ್ ಕುಮಾರ್ ಅವರೇ DOP ಆಗಿ ಕಾರ್ಯನಿರ್ವಹಿಸಲಿದ್ದಾರೆ. ಮದಗಜ ಚಿತ್ರದಲ್ಲಿ ಶ್ರೀಮುರಳಿ ಅವರಿಗೆ ನಾಯಕಿಯಾಗಿ ರಚಿತರಾಮ್ ಅಥವಾ ಆಶಿಕಾ ರಂಗನಾಥ್ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಈ ಚಿತ್ರದಲ್ಲಿ ಇದೆ ಮೊದಲಬಾರಿಗೆ ಶ್ರೀಮುರಳಿ ಅವರು ಉತ್ತರ ಭಾರತದ ಹುಡುಗನಾಗಿ ಕಾಣಿಸಿಕೊಳ್ಳಲಿದ್ದಾರೆ…

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here