ಸಚಿವ ಮಾಧುಸ್ವಾಮಿಯವರು ಇಂದು ರೈತ ಮಹಿಳೆಯನ್ನು ನಿಂದಿಸಿದ ಘಟನೆಯೊಂದು ನಡೆದಿದ್ದು ರಾಜಕೀಯ ವಲಯದಲ್ಲಿ ಇದು ಈಗಾಗಲೇ ಸಾಕಷ್ಟು ಕೋಲಾಹಲವನ್ನು ಸೃಷ್ಟಿ ಮಾಡಿದೆ. ಅದು ಮಾತ್ರವೇ ಅಲ್ಲದೇ ರೈತ ಮಹಿಳೆ ತನ್ನ ಸಮಸ್ಯೆಯನ್ನು ಹೇಳುವಾಗ, ಸಚಿವ ಮಾಧು ಸ್ವಾಮಿಯವರು ಆಕೆಯ ಮೇಲೆ ಕೋಪಗೊಂಡು ಆಕೆಯನ್ನು ನಿಂದಿಸಿದ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಾ ಸಾಗಿದ್ದು, ನೆಟ್ಟಿಗರು ಕೂಡಾ ಇದಕ್ಕೆ ತಮ್ಮ ಆಕ್ರೋಶವನ್ನು, ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

ಇನ್ನು ವಿರೋಧ ಪಕ್ಷಗಳವರು ಸುಮ್ಮನೆ ಇರುವರೇ? ಸಾಧ್ಯವೇ ಇಲ್ಲ. ಈಗಾಗಲೇ ರಾಜಕೀಯ ವಲಯದಲ್ಲಿ ಕೂಡಾ ವಿರೋಧಿಗಳು ಮಾಧುಸ್ವಾಮಿ ಅವರ ಮೇಲೆ ಟೀಕೆಗಳ ಮಳೆ ಸುರಿಸಿ, ಅವರ ಕೋಪದ ಮಾತು ರೈತ ಮಹಿಳೆಯನ್ನು ಅವರು ನಿಂದಿಸಿದ್ದನ್ನು ಕುರಿತಾಗಿ ವಿರೋಧ ವ್ಯಕ್ತಪಡಿಸಿ ವಾಗ್ದಾಳಿಯನ್ನು ನಡೆಸಿದ್ದಾರೆ. ಈ ವಿಷಯದ ಕುರಿತಾಗಿ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯನವರು ಕೂಡಾ ತಮ್ಮ ಸಿಟ್ಟನ್ನು ಹೊರಹಾಕಿದ್ದು, ಅವರು ಟ್ವೀಟ್ ಒಂದನ್ನು ಮಾಡಿ ಸಚಿವ ಮಾಧು ಸ್ವಾಮಿಯವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಿದ್ಧರಾಮಯ್ಯನವರು ತಮ್ಮ ಟ್ವೀಟ್ ನಲ್ಲಿ
ಅಹವಾಲು ಸಲ್ಲಿಸಲು ಬಂದಿದ್ದ ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯವರ ದುರ್ವರ್ತನೆ ಅಕ್ಷಮ್ಯ. ಯಡಿಯೂರಪ್ಪ ಅವರು ತಕ್ಷಣ ಸಚಿವರು, ಆ ರೈತ ಮಹಿಳೆಯ ಕ್ಷಮೆ‌ ಯಾಚಿಸುವಂತೆ‌‌ ಮಾಡಿ, ಅವರನ್ನು‌ ಸಂಪುಟದಿಂದ ಕೈ ಬಿಟ್ಟು‌‌ ಸರ್ಕಾರದ ಮಾನ‌ ಉಳಿಸಬೇಕು ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here