ಸ್ಥಳೀಯರಿಗೆ ಮಾತ್ರವೇ ಸರ್ಕಾರಿ ಹುದ್ದೆ ಎನ್ನುವ ಹೊಸ ಕಾನೂನೊಂದನ್ನು ಜಾರಿಗೆ ತರಲು ಸಿದ್ಧತೆಯನ್ನು ನಡೆಸುತ್ತಿದೆ ಮಧ್ಯ ಪ್ರದೇಶ ಸರ್ಕಾರ. ಕೊರೊನಾ ಲಾಕ್ ಡೌನ್ ನಂತರ ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿಯ ಪರಿಣಾಮ ಕೋಟ್ಯಂತರ ಜನರು ಕೆಲಸವನ್ನು ಕಳೆದುಕೊಂಡಿದ್ದಾರೆ.‌ ಜನರ ಜೀವನ ಸಂಕಷ್ಟದಲ್ಲಿ ಸಿಲುಕಿದೆ. ಅದೆಷ್ಟೋ ಜನರ ಜೀವನ ಬೀದಿಗೆ ಬರುವಂತಾಗಿದೆ. ಇವೆಲ್ಲವುಗಳ ನಡುವೆ ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಜನರಿಗೆ ಒಂದು ಶುಭ ಸುದ್ದಿಯನ್ನು ನೀಡುವುದಾಗಿ ತಿಳಿಸಿದ್ದರು.

ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಭೂಪಾಲ್ ನಲ್ಲಿ ಮಾತನಾಡುತ್ತಾ ಮಧ್ಯಪ್ರದೇಶ ರಾಜ್ಯದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಇಲ್ಲಿನವರದಾಗಿರುತ್ತದೆ ಎಂದು ಹೇಳಿದ್ದಾರೆ. ಸರ್ಕಾರಿ ಕೆಲಸಗಳು ಇನ್ಮುಂದೆ ಇಲ್ಲಿನ ಮಕ್ಕಳಿಗೆ ಮೀಸಲಿಡಲಾಗುತ್ತದೆ. ಶೀಘ್ರದಲ್ಲೇ ಈ ವಿಚಾರವಾಗಿ ಕಾನೂನನ್ನು ಕೂಡಾ ಜಾರಿಗೊಳಿಸಲಾಗುವುದು ಎಂದಿರುವ ಅವರು, ಇದರಿಂದ ರಾಜ್ಯದಲ್ಲಿ ಉಂಟಾಗಿರುವ ನಿರುದ್ಯೋಗ ಸಮಸ್ಯೆಗೊಂದು ಪರಿಹಾರ ಕೂಡಾ ಸಿಗಲಿದೆ ಎಂದು ಹೇಳಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here