ಹುಚ್ಚ ವೆಂಕಟ್ ನಿಜಕ್ಕೂ ಹುಚ್ಚನಂತೆ ವರ್ತಿಸುತ್ತಿರುವ ಘಟನೆಗಳು ಮಾದ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಇತ್ತೀಚಿಗಷ್ಟೇ ಭುವನ್ ಪೊನ್ನಣ್ಣ ಅವರು ಹುಚ್ಚ ವೆಂಕಟ್ ಚೆನ್ನೈನ ಬೀದಿಗಳಲ್ಲಿ ಕೊಳಕು ಬಟ್ಟೆ ಧರಿಸಿ ಅಲೆಯುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡುವ ಮೂಲಕ ಅವರ ಬಗ್ಗೆ ಕಾಳಜಿಯನ್ನು ಮೆರೆದಿದ್ದು, ಅವರನ್ನು ಮರಳಿ ಕರ್ನಾಟಕಕ್ಕೆ ಕರೆ ತಂದು, ಅಗತ್ಯವಿರುವ ಸೌಲಭ್ಯ ನೀಡಬೇಕು ಎಂದು ಮನವಿಯನ್ನು ಕೂಡಾ ಮಾಡಿದ್ದರು. ಅದಾದ ಮೇಲೆ ಹುಚ್ಚ ವೆಂಕಟ್ ಕರ್ನಾಟಕಕ್ಕೆ ಬಂದು ರಸ್ತೆಗಳಲ್ಲಿ ಸಂಚಾರ ಮಾಡುತ್ತಿರುವ ವಿಷಯ ಕೂಡಾ ಮಾದ್ಯಮಗಳಲ್ಲಿ ಸುದ್ದಿಯಾಗಿದೆ.

ಈ ನಡುವೆ ಹುಚ್ಚ ವೆಂಕಟ್ ಮಡಿಕೇರಿಯಲ್ಲಿ ದಾಂಧಲೆ ನಡೆಸಿರುವ ವಿಚಾರ ನಡೆದಿದ್ದು, ಹುಚ್ಚ ವೆಂಕಟ್ ದುಂಡಾವರ್ತನೆಯನ್ನು ತೋರುವ ಮೂಲಕ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದಾರೆನ್ನಲಾಗಿದೆ. ನಾಪೊಕ್ಲುವಿನ ದಿಲೀಪ್ ಎಂಬುವವರ ಕಾರಿನ ಮೇಲೆ ಹುಚ್ಚ ವೆಂಕಟ್ ಧಾಳಿ ಮಾಡಿದ್ದು, ಕಾರು ಗಾಜಿನ ಮೇಲೆ ಕಲ್ಲು ಹೊಡೆದು ಅದನ್ನು ಪುಡಿ ಪುಡಿ ಮಾಡಿದ್ದು, ಅಲ್ಲಿದ್ದ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಸಾರ್ವಜನಿಕರ ಮೇಲೆ ಹಲ್ಲೆಗೆ ಮುಂದಾದ ಹುಚ್ಚ ವೆಂಕಟ್ ಗೆ ಸಾರ್ವಜನಿಕರು ಕೂಡಾ ಧರ್ಮದೇಟು ನೀಡಿದ್ದು, ಈ ವಿಷಯ ಸ್ಥಳೀಯ ಪೋಲಿಸರಿಗೆ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಲಿಸರು ವೆಂಕಟ್ ಅವರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಹುಚ್ಚ ವೆಂಕಟ್ ಪಾಂಡವ ಪುರದ ರಸ್ತೆಯೊಂದರಲ್ಲಿ ಸಾರ್ವಜನಿಕರ ಜೊತೆ ಅವಾಚ್ಯ ಶಬ್ದಗಳಿಂದ ಜಗಳವಾಡಿದ ವಿಡಿಯೋ ಕೂಡಾ ವೈರಲ್ ಆದ ಬೆನ್ನಲ್ಲೇ ಈಗ ಇನ್ನೊಂದು ಘಟನೆ ನಡೆದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here