ಉತ್ತರ ಕರ್ನಾಟಕ ಜನರ ಪಾಲಿಗೆ ಬಹು ನಿರೀಕ್ಷಿತ ಹಾಗೂ ಬಹು ಮುಖ್ಯ ಎನಿಸಿರುವ ಮಹದಾಯಿ ನದಿ ನೀರಿನ ಹಂಚಿಕೆಯ ವಿಚಾರವಾಗಿ ಸುಪ್ರೀಂ‌ ಕೋರ್ಟ್ ತೀರ್ಪಿಗನುಗುಣವಾಗಿ ಕೇಂದ್ರ ಸರ್ಕಾರವು ಗೆಜೆಟ್ ನೊಟಿಫಿಕೇಷನ್ ಅನ್ನು ಹೊರಡಿಸಿದೆ. ರಾಜ್ಯದ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ನಿಯೋಗವು ಮಹದಾಯಿ, ಮೇಕೆದಾಟು ಮತ್ತು ಕೃಷ್ಣ ಯೋಜನೆಗಳು ಕುರಿತಾಗಿ ಕೇಂದ್ರ ಜಲ ಸಂಪನ್ಮೂಲ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರ ಮುಂದೆ ನೊಟಿಫಿಕೇಷನ್ ಹೊರಡಿಸುವಂತೆ ಒಂದು ಮನವಿಯನ್ನು ಮಾಡಿಕೊಂಡಿತ್ತು.

ಮಹದಾಯಿ ಅಧಿಸೂಚನೆಗೆ ಗೋವಾ ಸರ್ಕಾರವು ಸಮ್ಮತಿಯನ್ನು ಸೂಚಿಸಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ಮೂಲಕ ಗೆಜೆಟೆಡ್ ನೊಟಿಫಿಕೇಷನ್ ಅನ್ನು ಹೊರಡಿಸಿದೆ‌. ಮತ್ತೊಂದು ವಿಶೇಷ ಏನೆಂದರೆ ಮುಖ್ಯ ಮಂತ್ರಿ ಬಿ‌ಎಸ್ ಯಡಿಯೂರಪ್ಪನವರ ಹುಟ್ಟು ಹಬ್ಬದ ದಿನದಂದೇ
ಮಹದಾಯಿ ಯೋಜನೆಗೆ ನೊಟಿಫಿಕೇಷನ್ ಹೊರಡಿಸಿರುವುದು ಕೂಡಾ ಗಮನಾರ್ಹ ಎನಿಸಿದ್ದು, ಯಡಿಯೂರಪ್ಪ ಅವರಿಗೆ ಜನ್ಮ ದಿನದ ಕಾಣಿಕೆಯಾಗಿ ಈ ನೊಟಿಫಿಕೇಷನ್ ದೊರೆತಿದೆ ಎನ್ನುವಂತೆ ಇದೆ ವಾತಾವರಣ.

ಉತ್ತರ ಕರ್ನಾಟಕದ ಜನರ ದಶಕಗಳ ಹೋರಾಟಕ್ಕೆ ಜಯ ಸಂದಂತೆ ಆಗಿದ್ದು, ಈ ಭಾಗದ ರೈತರ ಮೊಗದಲ್ಲಿ ನಗೆಯನ್ನು ಮೂಡಿಸಿದೆ. ಅಲ್ಲದೆ ಸರ್ಕಾರಕ್ಕೆ ಕೂಡಾ ಕಳಸಾ-ಬಂಡೂರಿ ಯೋಜನೆಯನ್ನು ಶೀಘ್ರದಲ್ಲೇ ಕಾರ್ಯಗತ ಮಾಡುವ ಜವಾಬ್ದಾರಿಯನ್ನು ಕೂಡಾ ನೆನಪಿಸಿದೆ ಈ ನಿರ್ಣಯ.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಕೂಡಾ ಇದೇ ವಿಷಯವನ್ನು ತಮ್ಮ ಟ್ವಿಟರ್ ನಲ್ಲಿ ಕೂಡಾ ಹಂಚಿಕೊಂಡು ಸಂಭ್ರಮ ಪಟ್ಟಿದ್ದಾರೆ. ಒಟ್ಟಾರೆ ರೈತರ ದಶಕಗಳ ಹೋರಾಟಕ್ಕೆ ಸಂದ ಜಯ ಇದಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here