ಮತ್ತೆ ಮಹದಾಯಿಗಾಗಿ ಬೆಂಗಳೂರಿನ ಸಿ ಎಂ ಕಾವೇರಿ ನಿವಾಸದ ಮುಂದೆ ಮಹದಾಯಿ ಹೋರಾಟಗಾರರು ಹೋರಾಟ ನಡೆಸುತ್ತಿದ್ದಾರೆ.ಇಂದು ಬಿಳಿಗ್ಗೆ ಸುಮಾರು ೧೧ ಘಂಟೆಗೆ ವೀರೇಶ್ ಸೊರಬದಮಠ ನೇತೃತ್ವದಲ್ಲಿ ಸುಮಾರು ಮುವತ್ತು ರೈತ ಹೋರಾಟಗಾರರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ರಾಜ್ಯಕ್ಕೆ ನೀರುಬಿಡುವುದು ಅಸಾಧ್ಯ ಎಂದು ಉಲ್ಟಾ ಹೊಡೆದ ಪರಿಣಾಮವಾಗಿ ಇಂದು ಬೆಂಗಳೂರಿನ ಸಿಎಂ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಕೂಡಲೇ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗುವಂತೆ ಒತ್ತಾಯಿಸಲು ಈ ಪ್ರತಿಭಟನೆ ಮಾಡುತ್ತಿರುವುದಾಗಿ ವೀರೇಶ್ ಸೊರಬದಮಠ ತಿಳಿಸಿದ್ದಾರೆ.

ಆದರೆ ಸಿಎಂ ಸಿದ್ಧರಾಮಯ್ಯನವರು ಮೈಸೂರು ಜಿಲ್ಲಾ ಪ್ರವಾಸದಲ್ಲಿ ಇದ್ದಾರೆ.ಇಂದು ಮುಂಜಾನೆ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರನಿಗೆ ಮುಖ್ಯಮಂತ್ರಿ ಪೂಜೆಸಲ್ಲಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here