ಆಫ್ಘಾನಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಭರ್ಜರಿ11 ರನ್ನುಗಳ ಗೆಲುವು ಸಾಧಿಸಿದೆ. ಕೊನೆಯ ಓವರ್ ತನಕ ಕುತೂಹಲ ಹುಟ್ಟಿಸಿದ್ದ ಪಂದ್ಯದಲ್ಲಿ ಆಫ್ಘಾನಿಸ್ತಾನದ ಬ್ಯಾಟ್ಸ್‌ಮನ್ ಮಹಮದ್ ನಬಿ ಮಾಡಿದ ಹೋರಾಟದ ಬ್ಯಾಟಿಂಗ್ ನಿಂದಾಗಿ 224 ರನ್ ಗಳ ಗುರಿ ಬೆನ್ನತ್ತಿದ್ದ ಆಫ್ಘಾನಿಸ್ತಾನ ತಂಡ 213 ರನ್ ಗಳಿಸಿ ಆಲೌಟ್ ಆಗಿ ಸೋಲು ಒಪ್ಪಿಕೊಂಡಿತು. 49.5 ಓವರ್​ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 213 ರನ್​ಗಳಿಸಿ ಸೋಲು ಕಂಡಿತು.ಮಹಮದ್ ಶಮಿ ಕೊನೆಯ ಓವರ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಗಳನ್ನು ಪಡೆಯುವ ಮೂಲಕ ಭಾರತದ ಗೆಲುವಿನ ಸಂಭ್ರಮ ಹೆಚ್ಚಿಸಿದರು.

ಇದಕ್ಕೆ ಮೊದಲು ಟಾಸ್​ ಗೆದ್ದು ಬ್ಯಾಟಿಂಗ್​ ಇಳಿದಿದ್ದ ಭಾರತ, ಆರಂಭದಲ್ಲಿಯೇ ಎಡವಿತು. ಹೊಡಿಬಡಿ ದಾಂಡಿಗ ರೋಹಿತ್ ಶರ್ಮಾ ಇವತ್ತು ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಲ್ಲಲೇ ಇಲ್ಲ. 10 ಬಾಲ್​ಗಳನ್ನ ಎದುರಿಸಿದ್ದ ಶರ್ಮಾ, 1 ರನ್ ಬಾರಿಸಿ ಪೆವಿಲಿಯನ್ ಸೇರಿದರು. ನಂತರ ಕೆ.ಎಲ್​.ರಾಹುಲ್ ಹಾಗೂ ವಿರಾಟ್ ಕೊಹ್ಲಿ ತಂಡಕ್ಕೆ ಸ್ವಲ್ಪ ಆಸರೆಯಾದರು.
ಕನ್ನಡಿಗ ಕೆ.ಎಲ್​.ರಾಹುಲ್ ಕೂಡ ಅಷ್ಟೊಂದು ಸೊಗಸಾದ ಆಟವನ್ನ ಇಂದು ತೋರಿಸಲಿಲ್ಲ. 53 ಬಾಲ್ ಎದುರಿಸಿ 30 ರನ್ ನೀಡಿ ಔಟಾದರು. ನಂತರ ಬ್ಯಾಟಿಂಗ್​ಗೆ ಬಂದ ವಿಜಯ್ ಶಂಕರ್ ಕೂಡ ಬೇಗ ಪೆವಿಲಿಯನ್ ಪೆರೇಡ್ ನಡೆಸಿದ್ರು. 29 ರನ್​ ಸಿಡಿಸಿದ ಶಂಕರ್ ರೆಹಮತ್ ಅವರ ಬಾಲ್​ನಲ್ಲಿ ಎಲ್​​​ಬಿ ಬಲೆಗೆ ಬಿದ್ದರು.ಮಹೇಂದ್ರ ಸಿಂಗ್ ಧೋನಿ ಕೂಡ 28 ರನ್​ ನೀಡಿ ಬೇಗ ಔಟಾದರು.

ಕೇದಾರ್ ಜಾಧವ್ ತಂಡದ ಮೊತ್ತ ಹೆಚ್ಚಿಸುವಲ್ಲಿ ಸ್ವಲ್ಪ ಯಶಸ್ವಿಯಾದರು. ಒಂದು ಸಿಕ್ಸರ್, 3 ಬೌಂಡರಿ ಬಾರಿಸಿ ತಂಡಕ್ಕೆ 52 ರನ್​ಗಳ ಕಾಣಿಕೆ ನೀಡಿದರು. ಒನ್​ಡೌನ್ ಬಂದಿದ್ದ ವಿರಾಟ್​ ಕೊಹ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. 67 ರನ್​ ಗಳಿಸಿ ಆಡುತ್ತಿದ್ದಾಹ ನಬಿ ಬೌಲಿಂಗ್​ನಲ್ಲಿ ರಹಮತ್​ಗೆ ಕ್ಯಾಚ್ ನೀಡಿ ಔಟಾದರು. ಇನ್ನು ಭಾರತದ ಪರ ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಜಸ್​ಪ್ರೀತ್ ಬೂಮ್ರಾ ತಲಾ ಒಂದು ಒಂದು ರನ್ ಬಾರಿಸಿದರು. ಒಟ್ಟು ಇತರೆ 7 ರನ್​ ಸೇರಿ ಟೀಂ ಇಂಡಿಯಾ ನಿಗದಿತ 50 ಓವರ್​ನಲ್ಲಿ 224 ರನ್​ಗಳಿಸಲಷ್ಟೇ ಶಸಕ್ತವಾಯಿತು…

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here