ಮಹಾರಾಷ್ಟ್ರ ದ ರಾಜಕೀಯ ಅಸ್ಥಿರತೆಯು ಚುನಾವಣೆ ನಂತರ ಸಾಕಷ್ಟು ಮುಂದುವರೆದಿತ್ತು‌‌. ಚುನಾವಣೆ ಮುಗಿದು ಹಲವು ದಿನಗಳೇ ಕಳೆದರೂ ಅಲ್ಲಿ ಯಾವುದೇ ರಾಜಕೀಯ ಪಕ್ಷವೂ ಕೂಡಾ ಸರ್ಕಾರವನ್ನು ರಚಿಸಲು ವಿಫಲವಾಗಿತ್ತು‌. ರಾಜ್ಯಪಾಲರು ನೀಡಿದ್ದು ಗಡುವಿನ ಒಳಗೆ ರಾಜಕೀಯ ಪಕ್ಷಗಳು ಯಾವುದೇ ಒಂದು ನಿರ್ದಿಷ್ಟವಾದ ನಿರ್ಧಾರಕ್ಕೂ ಬರಲಿಲ್ಲ ಹಾಗೂ ಸರ್ಕಾರ ರಚನೆಯೂ ನಡೆಯದ ಹಿನ್ನೆಲೆಯಲ್ಲಿ ರಾಜ್ಯಪಾಲರ ಶಿಫಾರಸ್ಸಿನ ಮೇಲೆ ಮಹಾರಾಷ್ಟ್ರದಲ್ಲಿ ರಾಷ್ಟ್ರ ಪತಿ ಆಳ್ವಿಕೆ ಜಾರಿಯಾಗಿರುವುದು ತಿಳಿದ ವಿಷಯವಾಗಿದೆ.

ಚುನಾವಣೆಯ ನಂತರ ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಸಿಎಂ ಆಗಬೇಕು ಅಂತಾ ಕನಸು ಕಂಡಿದ್ದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್​​ಗೆ ಇದರಿಂದ ಭಾರೀ ನಿರಾಸೆಯಾಗಿದೆ. ಮೊನ್ನೆಯಷ್ಟೇ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು‌. ಆದರೆ ಮತ್ತೊಮ್ಮೆ ಸಿಎಂ ಆಗಬೇಕೆಂದು ಕಂಡ ಕನಸು ಮಾತ್ರ ಭಗ್ನ ವಾಗಿದೆ. ಇದಾದ ನಂತರ ದೇವೇಂದ್ರ ಫಡ್ನವಿಸ್​ ಅವರು ನಿನ್ನೆ ಟ್ವಿಟರ್​ನಲ್ಲಿ ತಮ್ಮ ಹೆಸರನ್ನ ಬದಲಾಯಿಸಿಕೊಳ್ಳುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಇಷ್ಟು ದಿನ ಟ್ವಿಟರ್ ನಲ್ಲಿ ಅವರ ಖಾತೆಯ ಹೆಸರು ‘Caretaker Chief Minister of Maharashtra’ ಎಂಬುದಾಗಿತ್ತು. ಆದರೆ ನಿನ್ನೆಯಿಂದ ಆ ಹೆಸರನ್ನು ಬದಲಾಯಿಸಿ ‘Maharashtra’s Sevak’ ಮಹಾರಾಷ್ಟ್ರ ಸೇವಕ ಎಂದು ಬದಲಾವಣೆ ಮಾಡಿಕೊಂಡಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾದ ನಂತರ 19 ದಿನಗಳಾದರೂ ಯಾವ ಪಕ್ಷ ಕೂಡ ಸರ್ಕಾರ ರಚನೆಗೆ ಮುಂದೆ ಬಂದಿಲ್ಲ ಆದ ಕಾರಣ ಮೊನ್ನೆಯಿಂದ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಸ್ತಿತ್ವಕ್ಕೆ ಬಂದಿದೆ.
.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here