ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಲೇ ಸಾಗಿದ್ದು, ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಜುಲೈ 31 ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಹೀಗಾಗಿ ಹೊಸ ಮಾರ್ಗಸೂಚಿಗಳನ್ನು ರಾಜ್ಯ ಸರಕಾರ ಸೋಮವಾರ ಬಿಡುಗಡೆ ಮಾಡಿದೆ. ಇದರಲ್ಲಿ ಮುಂಬಯಿ ಮಹಾನಗರ ಸುತ್ತ ಮುತ್ತ ಅನಗತ್ಯ ಓಡಾಟಕ್ಕೆ ಸರಕಾರ ನಿರ್ಬಂಧ ಹೇರಿದೆ.ಕಚೇರಿಗೆ ತೆರಳುವವರಿಗೆ ಮತ್ತು ತುರ್ತು ಸೇವೆಗಳಲ್ಲಿ ತೊಡಗಿಸಿಕೊಂಡವರ ಪ್ರಯಾಣಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ.

ಆದರೆ ಕಚೇರಿಗೆ ತೆರಳಲು ಮತ್ತು ಕೆಲವು ಸಂದರ್ಭದಲ್ಲಿ ಮಾನವೀಯ ನೆಲೆಯ ಮೇಲೆ ಪ್ರಯಾಣಿಸಲು ಮಾತ್ರ ಅವಕಾಶ ಇರುತ್ತದೆ.ಶಾಪಿಂಗ್‌, ಹೊರಾಂಗಣ ವ್ಯಾಯಾಮ ಮೊದಲಾದವನ್ನು ಸ್ಥಳೀಯ ಪ್ರದೇಶಕ್ಕೆ ಸೀಮಿತಗೊಳಿಸುವಂತೆ ಸರಕಾರ ಆದೇಶಿಸಿದ್ದು, ಮಾಸ್ಕ್‌ ಧರಿಸಿ, ಅಗತ್ಯ ಅಂತರವನ್ನು ಕಾಪಾಡಿಕೊಳ್ಳುವಂತೆ ಮತ್ತು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡುವಂತೆ ಹೇಳಿದೆ.ಕಳೆದ 15 ದಿನಗಳಿಂದ ನಾವು ಎಚ್ಚರಿಕೆಯಲ್ಲಿ ಮತ್ತು ನಿಧಾನವಾಗಿ ಅಂಗಡಿ-ಮುಂಗಟ್ಟು, ಕಚೇರಿಗಳನ್ನು ತೆರೆಯುತ್ತಿದ್ದೇವೆ. ಮುಂಬಯಿಯಲ್ಲಿ ಅಗತ್ಯ ಸೇವೆಯಲ್ಲಿ ತೊಡಗಿಸಿಕೊಂಡ ಅಧಿಕಾರಿಗಳಿಗಾಗಿ ಸ್ಥಳೀಯ ರೈಲು ಸೇವೆ ಆರಂಭಿಸಿದ್ದೇವೆ.

ಗ್ರಾಮೀಣ ಭಾಗದಲ್ಲಿ ಸಣ್ಣ ಅಂಗಡಿ ತೆರೆಯಲು ಮತ್ತು ಉದ್ಯಮಕ್ಕೆ ಅವಕಾಶ ನೀಡಲಾಗಿದೆ. ಆದರೆ ನಮ್ಮ ತಲೆಯ ಮೇಲೆ ಇನ್ನೂ ಕೊರೊನಾ ಪಿಡುಗಿನ ತೂಗುಗತ್ತಿ ನೇತಾಡುತ್ತಿದೆ. ನಿಧಾನವಾಗಿ ನಾವು ಆರ್ಥಿಕ ಚಟುವಟಿಕೆಗೆ ಅವಕಾಶ ನೀಡುತ್ತಿದ್ದೇವೆ ಎಂದರೆ ಅಪಾಯ ಮುಗಿಯಿತು ಎಂದರ್ಥವಲ್ಲ. ಅಗತ್ಯ ಇದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ ಎಂದು ನಾನು ವಿನಂತಿಸಿಕೊಳ್ಳುತ್ತೇನೆ ಎಂದು ಠಾಕ್ರೆ ಹೇಳಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here