ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಭಾರತದ ಸ್ಟಾರ್ ಕ್ರಿಕೆಟಿಗ ಎನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯವನ್ನು ಹೇಳಿದ್ದಾರೆ. ಧೋನಿ ಇದುವರೆವಿಗೂ ಒಟ್ಟು 350 ಏಕದಿನ ಪಂದ್ಯಗಳನ್ನು ಆಡಿರುವ ಧೋನಿ, ಒಟ್ಟು 10 ಶತಕ ದಾಖಲಿಸಿದ್ರು. ಅಲ್ಲದೇ ಇವರು ಏಕದಿನದಲ್ಲಿ ಪಂದ್ಯಗಳಲ್ಲಿ ಒಟ್ಟು 10,773 ರನ್ ಗಳಿಸಿರುವ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಧೋನಿ ಅವರು 90 ಟೆಸ್ಟ್​ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು 4876 ರನ್​ ಗಳಿಸಿದ್ದಾರೆ. ಅದೇ ರೀತಿ ಅವರು ಒಟ್ಟು 98 T20 ಪಂದ್ಯಗಳಲ್ಲಿ 1617 ರನ್​ ಗಳಿಸಿದ್ದರು.

ಭಾರತಕ್ಕೆ ಒಂದಲ್ಲಾ ಎರಡೆರಡು ಬಾರಿ ವಿಶ್ವಕಪ್ ಗಳಿಸಿಕೊಟ್ಟ ಟೀಂ ಇಂಡಿಯಾದ ನಾಯಕ ಕೂಡಾ ಆಗಿದ್ದರು ಮಹೇಂದ್ರ ಸಿಂಗ್ ಧೋನಿ. ಧೋನಿ ಕ್ರಿಕೆಟ್ ಗಾಗಿ 16 ವರ್ಷಗಳ ಕಾಲವನ್ನು ಕ್ರೀಡಾಕಾರನಾಗಿ ಕಳೆದಿದ್ದಾರೆ. ಅವರು 2013 ರಲ್ಲಿ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಗಳಿಗೆ ವಿದಾಯವನ್ನು ಹೇಳಿದ್ದರು. ಈಗ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆಯನ್ನು ಮಾಡಿರುವುದು ಅವರ ಅಸಂಖ್ಯಾತ ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here