ಮಹೇಶ್ವರದಲ್ಲಿ ನಡೆದ ದಾಳಿಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಧ್ಯಪ್ರದೇಶದ ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರನ್ನು ಇಬ್ಬರು ಮಹಿಳೆಯರು ಥಳಿಸಿದ್ದಾರೆ. ಸ್ಥಳೀಯರು ತಮ್ಮ ಮೊಬೈಲ್ ಫೋನ್‌ಲ್ಲಿ ರೆಕಾರ್ಡ್ ಮಾಡಿರುವ ವಿಡಿಯೋವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.ಅಕ್ರಮ ಮದ್ಯ ಮಾರಾಟದ ಶಂಕೆ ಮೇರೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಶುಕ್ರವಾರ ಜಿಲ್ಲೆಯ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ವಿಡಿಯೋದಲ್ಲಿ ದಾಳಿ ನಡೆಸಿದ್ದ ಮನೆಯ ನಿವಾಸಿಗಳು ಅಬಕಾರಿ ಇಲಾಖೆ ತಂಡದೊಂದಿಗೆ ವಾಗ್ವಾದ ನಡೆಸಿದ್ದಾರೆ.

ಆಗ ಒಬ್ಬ ಮಹಿಳೆ ಇದ್ದಕ್ಕಿದ್ದಂತೆ ಸಬ್‌ಇನ್‌ಸ್ಪೆಕ್ಟರ್‌ ಮೋಹನ್‌ಲಾಲ್ ಭಯಾಲ್ ಎಂಬುವರು ತನ್ನ ಮಗಳಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅವರನ್ನು ಇತರ ಜನರೊಂದಿಗೆ ಹೊಡೆಯಲು ಆರಂಭಿಸುತ್ತಾಳೆ. ಅಧಿಕಾರಿಗೆ ಕಪಾಳಮೋಕ್ಷ ಮಾಡುವಾಗ ಅವರು ತಪ್ಪಿಸಿಕೊಳ್ಳದಂತೆ ತಡೆಯಲು ಅವರು ಮನೆಯ ಮುಖ್ಯ ಬಾಗಿಲನ್ನು ಮುಚ್ಚುತ್ತಾರೆ. ಆಕೆಯನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದ ಅಧಿಕಾರಿಯ ಅಂಗಿಯ ಕಾಲರ್‌ ಹಿಡಿದು ಅವರನ್ನು ರಸ್ತೆಗೆ ಎಳೆದು ತರುತ್ತಾಳೆ.

ಶೀಘ್ರದಲ್ಲೇ ಇತರ ಜನರು ಮಹಿಳೆಯೊಂದಿಗೆ ಸೇರಿ ಅಧಿಕಾರಿ ಮೇಲೆ ಹಲ್ಲೆ ನಡೆಸುತ್ತಾರೆ. ಈ ವೇಳೆ ಬಂದ ಮತ್ತೊಬ್ಬ ಮಹಿಳೆ ಕೋಲಿನಿಂದ ಹಿಗ್ಗಾಮುಗ್ಗ ಥಳಿಸುತ್ತಾಳೆ. ಅಧಿಕಾರಿಗಳನ್ನು ಇತರರು ನಿಂದಿಸುತ್ತಾರೆ. ವಿಡಿಯೋದಲ್ಲಿ ಘಟನೆ ನಡೆಯುವ ವೇಳೆ ಇತರೆ ಅಧಿಕಾರಿಗಳು ಇದ್ದರೂ ಕೂಡ ಯಾರೊಬ್ಬರು ಮಧ್ಯೆ ಪ್ರವೇಶಿಸಿ ಇದನ್ನು ತಡೆಯಲಿಲ್ಲ. ಈ ಕುರಿತು ಮಹಿಳೆ ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here