ಕನ್ನಡ ಕಿರುತೆರೆಯಲ್ಲಿ ಹಲವಾರು ಮನರಂಜಾನತ್ಮಕ‌ ಕಾರ್ಯಕ್ರಮಗಳನ್ನು ನೀಡುವಲ್ಲಿ ಸದಾ ಮುಂದು . ಹಲವಾರು ರಿಯಾಲಿಟಿ ಷೋಗಳ‌ ಮೂಲಕ ಜನರನ್ನು ರಂಜಿಸುತ್ತಿರುವ  ಕಲರ್ಸ್ ಸೂಪರ್ ಚಾನಲ್ಲಿನ ಜನಪ್ರಿಯ ಕಾರ್ಯಕ್ರಮಗಳಲ್ಲಿ ಮಜಾ ಭಾರತ ಸಹ ಒಂದು ಖ್ಯಾತ ಸಂಗೀತ ನಿರ್ದೇಶಕ‌ ಗುರುಕಿರಣ್ ಮತ್ತು ಜನಪ್ರಿಯ ನಟಿ‌ ಡಿಂಪಲ್ ಕ್ವೀನ್ ರಚಿತಾರಾಮ್ ಅವರು ತೀರ್ಪುಗಾರರಾಗಿ‌ ನಡೆಸಿಕೊಡುತ್ತಿರುವ ಮಜಾಭಾರತ ಕಾರ್ಯಕ್ರಮ ಒಂದು ಹಾಸ್ಯ ಪೂರ್ಣ ಕಾರ್ಯಕ್ರಮವಾಗಿದ್ದು ಈ ಷೋ ಮೂಲಕ ಹಲವಾರು ಕಲಾವಿದರ ಕಲೆ ನಾಡಿಗೆ ಚಿರಪರಿಚಿತವಾಗುತ್ತಿದೆ ಎನ್ನಬಹುದು. ‌ಎಲ್ಲರನ್ನು ನಕ್ಕು ನಗಿಸುವ ಮಜ ಭಾರತ ಕಾರ್ಯಕ್ರಮ ಈ ವಾರ ಬಹಳ ವಿಶೇಷತೆಗಳಿಂದ ಕೂಡಿದೆ.

ಈ ವಾರದ ವಿಶೇಷತೆ ಏನೆಂದರೆ ಈ ವಾರದ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ವಿ.ರವಿಚಂದ್ರನ್ , ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ್ , ಚಾಲೆಂಜಿಂಗ್ ಸ್ಟಾರ್ ದರ್ಶನ್ ,ರಾಕಿಂಗ್ ಸ್ಟಾರ್ ಯಶ್ ಅವರು ಆಗಮಿಸಿದ್ದಾರೆ. ಆದರೆ ಈ ಯಾವ ಸ್ಟಾರ್ ನಟರು ರಿಯಲ್ಲಾಗಿ ಆಗಮಿಸಿಲ್ಲ ಇವರ ಬದಲಾಗಿ ಈ ಸ್ಟಾರ್ ನಟರನ್ನೇ ಹೋಲುವ ಜೂನಿಯರ್ ಕಲಾವಿದರು ಮಹಾಭಾರತ ಕಾರ್ಯಕ್ರಮದಲ್ಲಿ ಮಜಾ ಕೊಡ್ತಿದ್ದಾರೆ. ಆದರೆ ಈ ಜೂನಿಯರ್ ಕಲಾವಿದರ ಜೊತೆಗೆ ರಿಯಲ್ಲಾಗಿ

 

 

ರಿಯಲ್ ಸ್ಟಾರ್ ಉಪೇಂದ್ರ ಅವರೂ ಮಜಾಭಾರತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಳೆದ ವಾರದ ಹಿಂದೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ,ರಚಿತಾರಾಮ್  ಅಭಿನಯದ ಐ ಲವ್ ಯೂ ಚಿತ್ರದ ಪ್ರಮೋಷನ್ ವೇಳೆ ರಿಯಲ್ ಸ್ಟಾರ್ ಉಪೇಂದ್ರ ಅವರು ಮಜಭಾರತ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.ಈಗಾಗಲೇ ಈ ಕಾರ್ಯಕ್ರಮದ ಪ್ರೊಮೋ ಸಖತ್ ಸದ್ದು ಮಾಡುತ್ತಿದೆ.

#Shortcutಸ್ಯಾಂಡಲ್ ವುಡ್ ಜ್ಯೂನಿಯರ್ ಗಳೆಂಬ ಫ್ಯಾಮಿಲಿಗೆ ರಿಯಲ್ ಸ್ಟಾರ್ ಉಪೇಂದ್ರ ಸೇರ್ಪಡೆ 🤩ಮಜಾಭಾರತ ಸೀಸನ್ 3| ಸೋಮ-ಶುಕ್ರ, ರಾತ್ರಿ 8ಕ್ಕೆ#MajaaBharatha #ColorsSuper

Colors Super यांनी वर पोस्ट केले सोमवार, २४ जून, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here