ನಿರ್ಭಯಾ ಪ್ರಕರಣದ ನಾಲ್ಕು ಜನ ಆರೋಪಿಗಳಿಗೂ ಇಂದು ಗಲ್ಲು ಶಿಕ್ಷೆಯಾದ ನಂತರ ದೇಶದಾದ್ಯಂತ ಅನೇಕರು ತಮ್ಮ ಸಂತೋಷವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ‌. ಕಡೆಗೂ ನ್ಯಾಯಕ್ಕೆ ಗೆಲುವು ಸಿಕ್ಕಿತು ಎಂದು ಎಲ್ಲೆಡೆ ಹಲವರು ಹರ್ಷವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಟಿ, ರಾಜಕಾರಣಿ ಮಾಳವಿಕ ಅವಿನಾಶ್ ಅವರು ಯಾರಾದರೂ ನಿರ್ಭಯಾ ಕುರಿತಾದ ಸಿನಿಮಾ ಮಾಡಿದರೆ, ಅದರಲ್ಲಿ ನಾನು ನಿರ್ಭಯಾ ತಾಯಿಯ ಪಾತ್ರದಲ್ಲಿ ನಟಿಸುವುದಾಗಿ ಹೇಳಿದ್ದಾರೆ. ಹೀಗೆಂದು ಅವರು ತಮ್ಮ ಟ್ವಿಟರ್ ನಲ್ಲಿ ಟ್ವೀಟ್ ಒಂದನ್ನು ಮಾಡುವ ಮೂಲಕ ತಿಳಿಸಿದ್ದಾರೆ.

ನಿರ್ಭಯಾ ಆರೋಪಿಗಳಿಗೆ ಶಿಕ್ಷೆಯಾದ ನಂತರ ಇಂದು ನಿರ್ಭಯಾ ದೋಷಿಗಳಿಗೆ ಮರಣದಂಡನೆ ಆಗಿದೆ. ನಿರ್ಭಯಾ ಳಿಗೆ ಇಂದು ನ್ಯಾಯ ಸಿಕ್ಕಿದ್ದು, ಇದು ದೇಶದ ಪ್ರತಿಯೊಬ್ಬ ಮಗಳಿಗೆ ಸಿಕ್ಕ ಗೆಲುವು ಎಂದು ನಿರ್ಭಯಾ ತಾಯಿ ಆಶಾದೇವಿ ಅವರು ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದರು. ನಿರ್ಭಯಾ ತಾಯಿ ಅವರ ಮಾತುಗಳನ್ನು ಕೇಳಿದ ನಟಿ ಮಾಳವಿಕ ಅವಿನಾಶ್ ಅವರು ಅದಕ್ಕೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಅದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.‌

ಹಾಗೇ ಪ್ರತಿಕ್ರಿಯೆ ನೀಡುವಾಗ ತಮ್ಮ ಟ್ವೀಟ್ ನಲ್ಲಿ ಆಕೆ ಯಾರಾದರೂ ಸಿನಿಮಾವನ್ನು ಮಾಡುತ್ತಿದ್ದರೆ, ನಾನು ಅದರಲ್ಲಿ ಆಶಾದೇವಿ ಅವರ ಪಾತ್ರವನ್ನು ನಿರ್ವಹಿಸಲು ನನ್ನ ಸೇವೆಯನ್ನು ನೀಡುತ್ತೇನೆ. ಆಕೆ ಇಂದು ನಮ್ಮ ರಾಷ್ಟ್ರೀಯ ಹೀರೋ ಆಗಿ ಕಂಡಿದ್ದಾರೆ. ಎಂತಹ ತಾಯಿ ಆಕೆ? ಎಂದು ತಮ್ಮ ಮೆಚ್ಚುಗೆಯ ಮಾತುಗಳನ್ನು ಅವರು ಹೇಳಿದ್ದಾರೆ. ತಾವು ಆಶಾ ದೇವಿ ಪಾತ್ರವನ್ನು ನಿರ್ವಹಿಸುವ ಆಸಕ್ತಿಯನ್ನು ಹಾಗೂ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here