ರಾಜ್ಯದ ದೋಸ್ತಿ ಸರ್ಕಾರದಲ್ಲಿ ಇದ್ದಕ್ಕಿದ್ದಂತೆ ಆದ ಬೆಳವಣಿಗೆಗಳು, ಬದಲಾವಣೆಗಳ ಬಿಸಿ , ದೇಶದ ರಾಜಕೀಯದ ಕೇಂದ್ರವಾದ ರಾಜಧಾನಿ ದೆಹಲಿಗೂ ತಟ್ಟಿದೆ. ರಾಜ್ಯದಲ್ಲಿ ಆದ ಅನಿರೀಕ್ಷಿತ ಬೆಳವಣಿಗೆಗಳಿಂದ ಕಾಂಗ್ರೆಸ್ ನ ಹಿರಿಯ ನಾಯಕರು ನಿನ್ನೆ ದೆಹಲಿಯಲ್ಲಿ ಸಭೆಯನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ರಾಜ್ಯದಲ್ಲಿ ಸರ್ಕಾರವನ್ನು ಉಳಿಸುವ ಜವಾಬ್ದಾರಿಯನ್ನು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ನೀಡಲಾಗಿದೆ. ದೆಹಲಿಯ ವಾರ್ ರೂಂ ನಲ್ಲಿ ಸಭೆ ನಡೆಸಲಾಗಿದ್ದು, ಕಾಂಗ್ರೆಸ್ ನ ಹಿರಿಯ ನಾಯಕರು ಅಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಚರ್ಚೆ ನಡೆದಿದ್ದು, ಅನೇಕ ವಿಷಯಗಳನ್ನು ಚರ್ಚಿಸಿಲಾಗಿದೆ. ಅನಂತರ ವರಿಷ್ಠರು ನೀಡಿರುವ ಸೂಚನೆ ಹಾಗೂ ನಿರ್ದೇಶನದ ಮೇರೆಗೆ ಖರ್ಗೆ ಅವರು ನಿನ್ನೆ ರಾತ್ರಿಯೇ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಸಭೆ ಮುಗಿದ ನಂತರ ಮಾದ್ಯಮಗಳ ಮುಂದೆ ಮಾತನಾಡಿದ ಖರ್ಗೆ, ಇನ್ನೂ ಯಾವ ಶಾಸಕರ ರಾಜೀನಾಮೆ ಕೂಡಾ ಸ್ವೀಕೃತಿಯಾಗಿಲ್ಲ ಎಂದಿದ್ದು, ಯಾರೂ ಕೂಡಾ ಪಕ್ಷದ ಬಗ್ಗೆಯಾಗಲೀ, ನಾಯಕತ್ವದ ಬಗ್ಗೆಯಾಗಲೀ ಅಸಮಾಧಾನವನ್ನು ಹೊರಹಾಕಿಲ್ಲ ಎಂದಿದ್ದಾರೆ.

ಸರ್ಕಾರ ಉಳಿಸುವ ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದ ಖರ್ಗೆಯವರು, ಬಿಜೆಪಿ ಅಧಿಕಾರದ ಹಾಗೂ ಹಣದ ಆಮಿಷವನ್ನು ತೋರುತ್ತಾ ಸರ್ಕಾರವನ್ನು ಬೀಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ ಎಂದು ಟೀಕಿಸಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಬಗ್ಗೆ ಕೂಡಾ ಕಿಡಿಕಾರಿದ ಖರ್ಗೆ ಅವರು, ಆ ಇಬ್ಬರೂ ಶಾಸಕರನ್ನು ತಮ್ಮತ್ತ ಸೆಳೆಯಲು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯನ್ನು ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿಯನ್ನು ನಡೆಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here