ಪುಲ್ವಾಮಾ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದ ಘಟನೆಗೆ ಸಂಬಂಧಿಸಿದಂತೆ ಭಾರತ ಮಂಗಳವಾರ ಪಾಕಿಸ್ತಾನ ಉಗ್ರರ ವಿರುದ್ಧ ಪ್ರತೀಕಾರ ತೆಗೆದುಕೊಂಡಿದೆ. ಪಾಕಿಸ್ತಾನದ ಗಡಿಯೊಳಗೆ ನುಗ್ಗಿ 21 ನಿಮಿಷಗಳ ಕಾಲ ಯಶಸ್ವಿ ಕಾರ್ಯಚರಣೆ ನಡೆಸಿದ ಭಾರತೀಯ ವಾಯುಪಡೆ 200-300 ಉಗ್ರರನ್ನು ಖಲಾಸ್ ಮಾಡಿದೆ.ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಒಟ್ಟು 12 ಮಿರಾಜ್‌ ಯುದ್ಧ ವಿಮಾನಗಳು ಪಾಕಿಸ್ತಾನಕ್ಕೆ ನುಗ್ಗಿ ‘ಏರ್ ಸ್ಟ್ರೈಕ್’ ನಡೆಸುವ ಮೂಲಕ ಬಾಂಬ್‌ಗಳ ಸುರಿಮಳೆಗರೆದ ಭಾರತೀಯ ಸೇನೆ, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಲಾಂಚಿಂಗ್‌ ಪ್ಯಾಡ್‌ಗಳು ಛಿದ್ರ ಛಿದ್ರಗೊಳಿಸಿದೆ. ಪೋಕ್ ಪ್ರವೇಶಿಸಿ ಸುಮಾರು 1000 ಕೆಜಿ ಬಾಂಬ್‌ ಅನ್ನು ಉಗ್ರರ ಮೇಲೆ ಹಾಕಿರುವ ಸೇನೆ ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್ ಮತ್ತು ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದೆ.

ಇನ್ನು ಈ ಘಟನೆ ಬಗ್ಗೆ ಖರ್ಗೆ ಮಾತನಾಡಿ  ದೇಶದ ರಕ್ಷಣೆಗೆ ನಮ್ಮ ಸೇನೆ ಕೈಗೊಳ್ಳುವ ಕಾರ್ಯಕ್ಕೆ ಎಲ್ಲರೂ ಒಗ್ಗೂಡಿ ಬೆಂಬಲಿಸುತ್ತಿದ್ದೇವೆ. ಪಾಕ್‌ನಲ್ಲಿರುವ ಉಗ್ರರ ಮೇಲೆ ನಮ್ಮ ಸೇನೆ ತಕ್ಕ ಕಾರ್ಯಾಚರಣೆ ಮಾಡುತ್ತಿದೆ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.ಇದಕ್ಕಾಗಿ ನಮ್ಮ ಭಾರತೀಯ ಸೇನೆಯನ್ನು‌ ನಾನು ಅಭಿನಂದಿಸುವೆ. ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ಸೇನೆ ಏರ್‌ಸ್ಟ್ರೈಕ್ ನಡೆಸಿದ ಬಗ್ಗೆ ಸಮಗ್ರ ಮಾಹಿತಿ ಇಲ್ಲ. ಉಗ್ರರ ಮೇಲೆ ಎಲ್ಲ ಸರ್ಕಾರಗಳು ದಾಳಿ ಮಾಡಿಕೊಳ್ಳುತ್ತಾ ಬಂದಿವೆ.

ಇದೊಂದು ನಿರಂತರ ಪ್ರಕ್ರಿಯೆ. ನಮ್ಮ ಸರ್ಕಾರವಿದ್ದಾಗ ಆರು ಬಾರಿ ದಾಳಿ ನಡೆಸಿತ್ತು. ಇದು ಸರ್ಕಾರ ತಗೆದುಕೊಳ್ಳುವ ಕ್ರಮವಲ್ಲ. ಸೇನೆ ಆಗಾಗ ನಿರ್ಣಯ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.ಸೇನೆಗೆ ಬಲ ಕೊಡುವ ಕೆಲಸವನ್ನು ನಾವು ಮಾಡಬೇಕು. ನಮ್ಮ ಸೈನಿಕರ ಕಾರ್ಯಾಚರಣೆ ಬಗ್ಗೆ ಹೆಚ್ಚಿನ ವಾಖ್ಯಾನ ಮಾಡುವ ಅವಶ್ಯಕತೆ ಇಲ್ಲ. ಪಾಕ್ ಎರಡು ತುಕಡಿಯಾಗಿ ಬಾಂಗ್ಲಾದೇಶ ಲಿಬರೇಟ್ ಮಾಡಿ ಕೊಟ್ಟಿದ್ದೇವೆ. ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಒಂದು ಲಕ್ಷ ಪಾಕ್ ಸೈನಿಕರನ್ನು ಬಂಧಿಸಲಾಗಿತ್ತು. ಅವರು ಮತ್ತೆ ಬಿಡಿಸಿಕೊಂಡು ಹೋಗಿದ್ದರು. ಇಂದು ದೆಹಲಿಯಲ್ಲಿ ಸರ್ವಪಕ್ಷದ ಸಭೆ ಇದೆ. ಭಾರತೀಯ ಸೇನೆ ಕೈಗೊಳ್ಳುವ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ ಎಂದು ಈಗಾಗಲೇ ತಿಳಿಸಿದ್ದೇವೆ ಎಂದು ತಿಳಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here