ಕೊರೊನಾ ಸೋಂಕಿತರ ಪರೀಕ್ಷಿಸುವ ಹಾಗೂ ಅವರಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿ ಧರಿಸುವ ಗೌನ್ ಗಳಲ್ಲಿ ರಾಜಕೀಯ ನುಗ್ಗಿದೆಯಾ ಎನ್ನುವ ಮಾತೊಂದು ಇದೀಗ ಕೇಳಿ ಬರುತ್ತಿದೆ. ಗೌನ್ ಗಳ ಬಣ್ಣದ ಕುರಿತಾಗಿ ಇಂತಹ ಒಂದು ಪ್ರಶ್ನೆ, ಅನುಮಾನ ಹಾಗೂ ಮಾತು ಕೇಳಿ ಬಂದಿದ್ದು, ಈ ವಿಚಾರವನ್ನು ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿಯವರು ಕೂಡಾ ಒಂದು ಸುದ್ದಿ ಗೋಷ್ಟಿಯಲ್ಲಿ ಪ್ರಸ್ತಾಪಿಸಿರುವುದರಿಂದ ಈ ವಿಷಯ ಮುನ್ನೆಲೆಗೆ ಬರುವಂತಾಗಿದೆ. ಹಾಗಾದರೆ ಈ ಬಣ್ಣದ ಕುರಿತಾಗಿ ನಡೆದಿರುವ ಬೆಳವಣಿಗೆ ಹಾಗೂ ಇಲ್ಲಿ ಹೇಗೆ ರಾಜಕಾರಣ ನಡೆದಿದೆ ಎನ್ನುವುದಾದರೆ ಬನ್ನಿ ತಿಳಿಯೋಣ.

ಸಾಮಾನ್ಯವಾಗಿ ವೈದ್ಯರು, ನರ್ಸ್ ಗಳು ಧರಿಸುವ ದೈಹಿಕ ಸುರಕ್ಷಾ ಸಾಧನ ಅಥವಾ ಪಿಪಿಇ ಗಳು ನೀಲಿ, ಬಿಳಿ ಹಾಗೂ ಬೂದು ಬಣ್ಣಗಳಲ್ಲಿ ಇರುತ್ತವೆ. ಕೆಲವೊಮ್ಮೆ ಅವು ಗುಲಾಬಿ ಬಣ್ಣದಲ್ಲಿ ಇರುತ್ತದೆ. ಆದರೆ ಈಗ ಇದಕ್ಕೆ ಭಿನ್ನವಾಗಿ ಪಶ್ಚಿಮ ಬಂಗಾಳಕ್ಕೆ ಕಳುಹಿಸುತ್ತಿರುವ ಪಿಪಿಇ ಗಳು ಹಳದಿ ಬಣ್ಣದಾಗಿದ್ದು, ಸರ್ಕಾರ ಇದೇ ಬಣ್ಣ ವನ್ನು ಏಕೆ ಆರಿಸಿದೆ? ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ ದೀದಿ. ಅಲ್ಲದೆ ಅವರು ಈ ಬಣ್ಣ ಏಕೆ ಎಂದು ನನಗೆ ಆಶ್ಚರ್ಯವಾಗಿದೆ ಎಂದು ಕೂಡಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಈ ಕಿಟ್ ಗಳನ್ನು ಬಳಸುವ ಸಾಧ್ಯತೆ ತೀರಾ ಕಡಿಮೆ ಎಂದಿರುವ ಮಮತಾ ಬ್ಯಾನರ್ಜಿಯವರು ಅಲ್ಲದೆ ಬಣ್ಣದ ವಿಷಯದಲ್ಲಿ ಕೇಂದ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದೂ ಹಾಗೂ ತಾವು ಬೇಡಿಕೆಯಿಟ್ಟಿದ್ದು ಒಂದು ಲಕ್ಷ ಪಿಪಿಇ ಕಿಟ್ ಗಳಿಗಾಗಿ, ಆದರೆ ನಮಗೆ ಪೂರೈಕೆ ಆಗಿರುವುದು ಮಾತ್ರ ಕೇವಲ ಮೂರು ಸಾವಿರ ಮಾತ್ರ ಎಂದು ಅವರು ಕೇಂದ್ರವನ್ನು ದೂರಿದ್ದಾರೆ. ಮಮತಾ ಅವರ ಮಾತಿಗೆ ಕೇಂದ್ರದ ಪ್ರತಿಕ್ರಿಯೆ ಏನಾಗಬಹುದು? ಬಂಗಾಳಕ್ಕೆ ಏಕೆ ಹಳದಿ ಪಿಪಿಇ ಕಿಟ್ ಎಂಬುದಕ್ಕೆ ಉತ್ತರ ನೀಡುವುದಾ? ನಿರೀಕ್ಷೆಯಲ್ಲಿದ್ದಾರೆ ಮಮತಾ ಬ್ಯಾನರ್ಜಿಯವರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here