ಇಂದು ಸಂಜೆ ನಾಲ್ಕು ಗಂಟೆಯ ವೇಳೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ದೇಶವಾಸಿಗಳನ್ನು ಉದ್ದೇಶಿಸಿ ಭಾಷಣವನ್ನು ಮಾಡಿದರು. ಆ ಸಂದರ್ಭದಲ್ಲಿ ಪ್ರಧಾನಿಯವರು ಮಾತನಾಡುತ್ತಾ ಪ್ರಧಾನಮಂತ್ರಿ ಗರೀಬ್ ಯೋಜನೆಯಡಿ ಬರುವ ನವೆಂಬರ್​ ತಿಂಗಳವರೆಗೂ ಕೂಡಾ ದೇಶದ 80 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆ. ಜಿ ಅಕ್ಕಿ, 5 ಕೆ. ಜಿ ಗೋಧಿ ಹಾಗೂ ಒಂದು ಕೆ.ಜಿ ಬೇಳೆಯನ್ನು ಉಚಿತವಾಗಿ ವಿತರಿಸಲಾಗುವುದು ಎಂಬ ವಿಷಯವನ್ನು ತಿಳಿಸಿ ಈ ಕೊರೊನಾ ಸಂಕಷ್ಟದ ಸಮಯದಲ್ಲಿ ಜನರು ಬಡವರು ಯಾರೂ ಹಸಿದಿರಬಾರದು ಎಂದು ತಿಳಿಸಿದ್ದಾರೆ.

ಹೀಗೆ ಬಡವರಿಗಾಗಿ ಪ್ರಧಾನಮಂತ್ರಿ ಭಾಷಣದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕೂಡಾ ಒಂದು ಘೋಷಣೆಯನ್ನು ಮಾಡಿದ್ದಾರೆ. ಅವರು ತಮ್ಮ ಘೋಷಣೆಯಲ್ಲಿ ಜೂನ್ 2021ರವರೆಗೆ ಅಂದರೆ ಇನ್ನೊಂದು ವರ್ಷದವರೆಗೆ ಕೂಡಾ ಬಡವರಿಗೆ ಪಶ್ಚಿಮ ಬಂಗಾಳದಲ್ಲಿ ಉಚಿತ ಪಡಿತರ ವಿತರಿಸುವುದಾಗಿ ಘೋಷಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಚೀನಾ ಆ್ಯಪ್ ಗಳ ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರದ ಕುರಿತಾಗಿ ಕೂಡಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.‌

ಮಮತಾ ಬ್ಯಾನರ್ಜಿಯವರು ಚೀನಾ ಆ್ಯಪ್​ಗಳನ್ನು ಬ್ಯಾನ್ ಬ್ಯಾನ್ ಮಾಡುವುದಷ್ಟೇ ಅಲ್ಲ, ಚೀನಾಗೆ ತಕ್ಕ ಪಾಠವನ್ನು ಕೂಡಾ ಕಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಒಂದು ವರ್ಷದ ಕಾಲ‌ ತನ್ನ ರಾಜ್ಯದ ಜನತೆಗೆ ಉಚಿತವಾಗಿ ಪಡಿತರವನ್ನು ನೀಡುವ ಮಮತಾ ಬ್ಯಾನರ್ಜಿಯವರ ಈ ನಿರ್ಧಾರ ಪ್ರಸ್ತುತ ಎಲ್ಲರ ಗಮನವನ್ನು ಸೆಳೆದಿದೆ. ಕೊರೊನಾ ಸಂಕಷ್ಟದಲ್ಲಿ ನಲುಗಿರುವ ಬಡವರಿಗೆ ಈ ಸುದ್ದಿ ಸಂತಸವನ್ನು ಖಂಡಿತ ತಂದಿರಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here