ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯೊಂದರಲ್ಲಿ, ಒಬ್ಬ ವ್ಯಕ್ತಿಯು ತನ್ನ ಐದು ವರ್ಷದ ಮಗನ ಮೃತ ದೇಹವನ್ನು ಹೊತ್ತುಕೊಂಡು ಸುಮಾರು 88 ಕಿ.ಮೀ ದೂರದಲ್ಲಿ ನಡೆದು ಅಂತ್ಯ ಸಂಸ್ಕಾರ ಮಾಡಿದ್ದಾರೆ. ತಂದೆ ಮಂಚಾಲಾ ಮನೋಹರ್ ಅವರು ತಮ್ಮ ಮಗನ ಶವವನ್ನು ಹೊತ್ತುಕೊಂಡು ಚಿತ್ರಾವತಿ ನದಿಗೆ ಬಂದು ಅಂತಿಮ ವಿಧಿಗಳನ್ನು ನೆರವೇರಿಸಲು ಅನಂತಪುರ ಜಿಲ್ಲೆಯ ಆಂಧ್ರಪ್ರದೇಶದ ಗೋರಂಟ್ಲಾ ಗ್ರಾಮದಲ್ಲಿರುವ ತಮ್ಮ ಊರಿನಿಂದ ನಡೆದುಕೊಂಡೇ ಹೋಗಿದ್ದಾರೆ. ಮೃತ ದೇವ ಎನ್ನುವ ಬಾಲಕ ಮನೋಹರ್ ಅವರ ಮೂವರು ಮಕ್ಕಳಲ್ಲಿ ಕಿರಿಯನು.

ಸುಮಾರು 10 ದಿನಗಳ ಹಿಂದೆ, ಬಾಲಕನು ಗಂಟಲು ಸೋಂಕಿನಿಂದ ಬಳಲುತ್ತಿದ್ದನು ಆಗ ಆತನನ್ನು ಗೊರಾಂಟ್ಲಾದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತಿ. ಆದರೆ ದೇವಾ ಸ್ಥಿತಿ ಹದಗೆಟ್ಟಾಗ ಆತನನ್ನು ಹಿಂದೂಪುರದ ಸರ್ಕಾರಿ ಆಸ್ಪತ್ರೆಗೆ ಅಲ್ಲಿಂದ ಸ್ಥಳಾಂತರಿಸಲಾಯಿತು. ಆದರೆ ಮಂಗಳವಾರ ಬಾಲಕನ ಸ್ಥಿತಿ ಇನ್ನಷ್ಟು ಹದಗೆಟ್ಟಿತು, ವೈದ್ಯರು ಮನೋಹರ್ ಅವರನ್ನು ಬಾಲಕನನ್ನು ಬೆಂಗಳೂರು ಅಥವಾ ಕರ್ನೂಲ್‌ನ ಉತ್ತಮ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಆದರೆ ಮನೋಹರ್ ಅವರಿಗೆ ಚಿಕಿತ್ಸೆಗೆ ನೀಡಲು ಅಥವಾ ಪ್ರಯಾಣಿಸಲು ಕೂಡಾ ಹಣವಿರಲಿಲ್ಲ

ಬುಧವಾರ, ಹುಡುಗನ ಮೂಗು ಮತ್ತು ಬಾಯಿಯಿಂದ ರಕ್ತಸ್ರಾವವಾಗಿದ್ದು, ಅದಾದ ನಂತರ ಅವನು ಕೊನೆಯುಸಿರೆಳೆದಿದ್ದಾನೆ. ಮನೋಹರ್ ತನ್ನ ಮಗನ ದೇಹವನ್ನು ತನ್ನ ಹಳ್ಳಿಗೆ ಕೊಂಡೊಯ್ಯಲು ತನ್ನಲಿದ್ದ ಹಣವನ್ನು ಬಳಸಿಕೊಂಡಿದ್ದ. ನಂತರ ಅವರು ದೇವ ಅವರ ದೇಹವನ್ನು ಚಿತ್ರಾವತಿ ನದಿಗೆ ಕೊಂಡೊಯ್ಯಲು ಸುಮಾರು 88 ಕಿ.ಮೀ ನಡೆದು ಅಲ್ಲಿ ಸಮಾಧಿ ಮಾಡಿ, ಅಲ್ಲಿ ಅವರ ಅಂತಿಮ ವಿಧಿಗಳನ್ನು ನೆರವೇರಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here