ಇಂದು ಕನ್ನಡ ನಾಡಿನ ರೆಬೆಲ್ ಸ್ಟಾರ್ , ಮಂಡ್ಯದ ಗಂಡು, ಕಲಿಯುಗ ಕರ್ಣ ಎಂದೇ ಹೆಸರಾದ, ತನ್ನದೇ ಆದ ಗತ್ತು ಹಾಗೂ ಸ್ನೇಹಮಯಿ ಹೃದಯದಿಂದ ನಾಡಿನ ಜನರ ಮನಸೂರೆಗೊಂಡಿದ್ದ ಅಂಬರೀಶ್ ಅವರ 67 ನೇ ಜಯಂತೋತ್ಸವ. ಇದೇ ಮೊದಲ ಬಾರಿಗೆ ಅಂಬರೀಶ್ ಅವರಿಲ್ಲದ ಜನ್ಮ ದಿ‌ನ. ಅವರ ಜನ್ಮ ದಿನದ ಈ ಸಂದರ್ಭದಲ್ಲಿ ಅಂಬರೀಶ್ ಅವರ ಸಮಾಧಿ ಸ್ಥಳವನ್ನು ಬಹಳ ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ಅಲ್ಲದೆ ಈ ಬಾರಿ ಸುಮಲತ ಅವರು ನೂತನ ಸಂಸದೆಯಾಗಿ ಆಯ್ಕೆಯಾಗಿರುವುದು ಮತ್ತೊಂದು ವಿಶೇಷವಾಗಿದೆ. ಇಂದು ಸಂಸದೆ ಸುಮಲತ ಅಂಬರೀಶ್ ಹಾಗೂ ಅವರ ಪುತ್ರ ಅಭಿಷೇಕ್ ಸಮಾಧಿ ಸ್ಥಳಕ್ಕೆ ಬಂದು ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.

ಅದಾದ ನಂತರ ಅವರು ಅಲ್ಲಿಂದ ಮಂಡ್ಯಕ್ಕೆ ತೆರಳಲಿದ್ದಾರೆ. ಇಂದು ಅವರ ಮಂಡ್ಯದ ಭೇಟಿಗೆ ವಿಶೇಷತೆ ಕೂಡಾ ಇದೆ. ಕಾರಣ ಅಂಬರೀಶ್ ಅವರನ್ನು ಪ್ರೀತಿಸಿ , ಅಭಿಮಾನಿಸುವ ಅಂಬರೀಶ್ ಅವರ ಜಯಂತೋತ್ಸವ ಒಂದೆಡೆಯಾದರೆ, ಅವರೆಲ್ಲರೂ ಅಂಬಿ ಮೇಲಿನ ಅಭಿಮಾನದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕಿಳಿದ ಸುಮಲತಾ ಅವರನ್ನು ಗೆಲ್ಲಿಸಿ ಸಂಸದೆ ಸ್ಥಾನ ನೀಡಿದ್ದು ಆ ಸಂತಸ ಕೂಡಾ ಜೊತೆಯಾಗಿದೆ. ಸುಮಲತ ಅವರು ತನ್ನ ವಿಜಯಕ್ಕೆ ಕಾರಣರಾದ ಮಂಡ್ಯ ಜನರಿಗೆ ಧನ್ಯವಾದಗಳನ್ನು ಸಲ್ಲಿಸಲಿದ್ದು, ದೊಡ್ಡ ಪ್ರಮಾಣದಲ್ಲಿ ಜನ ಸೇರುವ ಸಾಧ್ಯತೆಗಳಿವೆ.

ಇಂದು ಮಂಡ್ಯದಲ್ಲಿ ಸುಮಲತ ಅವರಿಗೆ ಜೋಡೆತ್ತುಗಳೆಂದೇ ಕರೆಯಲ್ಪಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡಾ ಮಂಡ್ಯದಲ್ಲಿ ಸಾಥ್ ನೀಡುತ್ತಿದ್ದು, ಮಂಡ್ಯದಲ್ಲಿ ಇಂದು ಅಂಬರೀಶ್ ಅವರ ಜಯಂತೋತ್ಸವದ ಅಬ್ಬರ ದುಪ್ಪಟ್ಟಾಗಲಿದೆ. ಇಂದು ಮಂಡ್ಯದಲ್ಲಿ ಸುಮಲತ ಅವರು ವಿಜಯಯಾತ್ರೆ ಮಾಡಲಿದ್ದು, ಆ ಮೂಲಕ ಜನರಿಗೆ ಧನ್ಯವಾದಗಳನ್ನು ಅರ್ಪಿಸಲಿದ್ದಾರೆ. ಅಂಬರೀಶ್ ಅವರು ಇಲ್ಲವೆಂಬ ನೋವು ಮಾತ್ರ ಎಲ್ಲರಲ್ಲೂ ಇದ್ದೇ ಇದೆ. ಈ ಬಾರಿ ಅವರ ಜನ್ಮದಿನ ಸಂತಸದ ಜೊತೆಗೆ ಎಲ್ಲೋ ಒಂದೆಡೆ ಕೊರಗೊಂದನ್ನು ಕೂಡಾ ಉಳಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here