ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅಧಿಕೃತ ಮಾಹಿತಿ ನೀಡುತ್ತೇನೆ ಎಂದಿದ್ದ ಸುಮಲತಾ ಅಂಬರೀಶ್ ಬೆಂಗಳೂರಿನ ಖಾಸಗಿ‌ ಹೋಟೇಲ್ ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ಸುಮಲತಾ ಅಂಬರೀಶ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ , ರಾಕಿಂಗ್ ಸ್ಟಾರ್ ಯಶ್ , ಪುತ್ರ ಅಭಿಷೇಕ್ ಅಂಬರೀಶ್ , ಹಿರಿಯ ನಟ ದೊಡ್ಡಣ್ಣ , ಧೀರ ರಾಕ್ ಲೈನ್ ವೆಂಕಟೇಶ್ ಭಾಗವಹಿಸಿದ್ದರು. ಅಭಿಷೇಕ್ ಸ್ಟಾರ್ ಆಗಲು ಬೆಂಬಲಿಸುತ್ತೇವೆ. ರಾಜಕೀಯಕ್ಕೆ ಬೆಂಬಲ ನೀಡಲ್ಲ ಎನ್ನುವ ದೇವೇಗೌಡರ ಕುಟುಂಬದ ಹೇಳಿಕೆಗೆ ಟಾಂಗ್ ನೀಡಿದ ಅಭಿಷೇಕ್, ಸ್ಟಾರ್ ಆಗಲಿ, ರಾಜಕೀಯದಲ್ಲಾಗಲಿ ಯಾರನ್ನೂ ಪಕ್ಷ ಬೆಳೆಸಲ್ಲ, ಜನ ಬೆಳೆಸಲಿದ್ದಾರೆ.

ನಮ್ಮ ತಾಯಿಗೆ ನಾನು ಅಡ್ವೈಸ್ ಮಾಡುವಷ್ಟು ದೊಡ್ಡವನಲ್ಲ. ಆದರೆ ನನ್ನ ಫ್ರೆಂಡ್​ಗೆ ಅಡ್ವೈಸ್ ಮಾಡೋಕೆ ತುಂಬಾ ದೊಡ್ಡವರಿದ್ದಾರೆ ಅವರು ಮಾಡುತ್ತಾರೆ. ನಾನು ಅಡ್ವೈಸ್ ಮಾಡಲ್ಲ ಎಂದು ಪರೋಕ್ಷವಾಗಿ ಟೀಕೆ ಮಾಡಿದರು. ರಾಜಕೀಯ ಅನ್ನೋದು ಬ್ಯುಸಿನೆಸ್ ಅಲ್ಲ, ತಾಯಿಯ ಜೊತೆ ನಾನು ಪ್ರವಾಸ ಮಾಡಿದ್ದೇನೆ. ಹೋದಕಡೆಯಲೆಲ್ಲಾ ಉತ್ತಮ ರೆಸ್ಪಾನ್ಸ್ ಬಂದಿದೆ. ತಾಯಿಯ ಜೊತೆ ನಾನು ನಿಂತಿದ್ದೇನೆ ಮತ್ತು ನಮ್ಮ ಕುಟುಂಬದ ಇಬ್ಬರು ಅಣ್ಣಂದಿರೂ ಜೊತೆಗಿದ್ದಾರೆ ಎಂದು ತಿಳಿಸಿದರು.

ನಾವು ಸುಮ್ಮನೆ ರಾಜಕೀಯ ಮಾಡಲು ಆಗಲ್ಲ  ಜನರ ಇಚ್ಚೆ ಇದ್ದರೆ ಮಾತ್ರ ಅಲ್ಲಿಗೆ ಹೋಗೋಕೆ ಸಾಧ್ಯ ಎಂದು ನಟ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹೇಳಿದ್ದಾರೆ. ನಾನು ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ ಸದ್ಯಕ್ಕೆ ರಾಜಕೀಯಕ್ಕೆ ಬರುವ ಆಸೆಯಿಲ್ಲ, ಯಾರು ಯಾರನ್ನೂ ಬೆಳೆಸೋಕೆ ಆಗಲ್ಲ ಜನರೇ ನಮ್ಮನ್ನ ಬೆಳೆಸಬೇಕು ಎಂದರು.ತಾಯಿಯ ಜೊತೆ ನಾನು ಪ್ರವಾಸ ಮಾಡಿದ್ದೇನೆ. ಹೋದಕಡೆಯಲೆಲ್ಲಾ ಉತ್ತಮ ರೆಸ್ಪಾನ್ಸ್ ಬಂದಿದೆ. ತಾಯಿಯ ಜೊತೆ ನಾನು ನಿಂತಿದ್ದೇನೆ ಮತ್ತು ನಮ್ಮ ಕುಟುಂಬದ ಇಬ್ಬರು ಅಣ್ಣಂದಿರೂ ಜೊತೆಗಿದ್ದಾರೆ ಎಂದು ತಿಳಿಸಿದರು. ಕೆಲವರು ನಮ್ಮ ಕುಟುಂಬವನ್ನು ಮಂಡ್ಯದಿಂದ ದೂರ‌ ಇಡಲು‌ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಾನು ಅದಕ್ಕೆ ಅವಕಾಶ ನೀಡಲ್ಲ ಎಂದು ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಗುಡುಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here