ಇಂದು ದೇಶದ ಮುಂದಿನ ಐದು ವರ್ಷದ ಸಾರಥಿವಯಾರು ಎಂಬುದು ಘೊಷಣೆಯಾಗುವ ದಿವಸ. ಲೋಕಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು ದೇಶದ ಎಲ್ಲಾ ಕ್ಷೇತ್ರದ ಮತ ಎಣಿಕೆ ಆರಂಭವಾಗಿದೆ. ಈಗಾಗಲೇ ಅಂಚೆ ಮತ ಎಣಿಕೆ ಆರಂಭವಾಗಿದೆ. ದೇಶದ ಗಮನ ಸೆಳೆದಿದ್ದ ಕ್ಷೇತ್ರಗಳಲ್ಲಿ ನಮ್ಮ ಕರ್ನಾಟಕದ ಮಂಡ್ಯ ಜಿಲ್ಲೆ ಸಹ ಒಂದು ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತ ಅಂಬರೀಶ್ ಅವರು ಸ್ಪರ್ಧಿಸಿದ್ದ ಹೈ ವೋಲ್ಟೇಜ್ ಕ್ಷೇತ್ರ ಮಂಡ್ಯ. ಇಂದು ಬೆಳಿಗ್ಗೆಯಿಂದಲೇ ಗೆಲುವಿಗಾಗಿ ನಿಖಿಲ್ ಕುಮಾರಸ್ವಾಮಿ ಅವರು ನಾಡಿನ ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದರು.

ಇನ್ನು ಮಗನ ಗೆಲುವಿಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಬೆಂಗಳೂರಿನ ಜಯನಗರ ಮತ್ತು ಬನಶಂಕರಿ ದೇಗುಲಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು.ಇನ್ನು ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಈಗಾಗಲೇ ಜನ ನನಗೆ ಆಶೀರ್ವಾದ ಮಾಡಿದ್ದಾರೆ.ಇಂದು ಅಧಿಕೃತ ಘೋಷಣೆ ಬಾಕಿ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದರು .

ಇನ್ನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಿಖಿಲ್ ಗೆ ತೀವ್ರ ಪೈಪೋಟಿ ನೀಡಿದ್ದ ಸುಮಲತ ಅಂಬರೀಶ್ ಅವರು ನನ್ನ ಗೆಲುವಿಗಾಗಿ ಹಾರೈಸುತ್ತಿರುವ
ಅಪೇಕ್ಷಸುತ್ತಿರುವ ನಿರೀಕ್ಷೆಯಲ್ಲಿರುವ ಪ್ರತಿಯೊಬ್ಬರಿಗೂ ನನ್ನ ಹೃದಯ ಅಂತರಾಳದ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here