ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ರೈತರಾದ ಮಹೇಶ್ ಎಂಬುವವರ ಮನೆಯಲ್ಲಿ ಹುತ್ತ ಮೂಡಿದೆ.ಕಳೆದ ಮೂರು ವರ್ಷದಿಂದ ಈ ಹುತ್ತ ದಿನೇ ದಿನೇ ಬೆಳೆಯುತ್ತಲೇ ಇದೆ.ಸುಮಾರು 70 ಲಕ್ಷ ಖರ್ಚು ಮಾಡಿ ಕಟ್ಟಿದ ಡ್ಲೂಪ್ಲೇಕ್ಸ್ ಬಂಗಲೆಯಲ್ಲಿ ಮೂರು ವರ್ಷದಿಂದ ಬೆಳೆಯುತ್ತಿದೆ ಹುತ್ತ…!
ಹಲವಾರು ಮಂದಿಯ ಅನಿಸಿಕೆಯಂತೆ ಎಷ್ಟೇ ಹಗೆದು ಹಾಕಿದರು ನೀರು ಬಿಟ್ಟರು, ಆಸಿಡ್ ಹಾಕಿದರು ಕಡಿಮೆಯಾಗದೇ ಮತ್ತೇ- ಮತ್ತೇ ಮತ್ತಷ್ಟು ಜಾಸ್ತಿಯಾಗುತ್ತಿದೆ ಹುತ್ತದ ಬೆಳವಣಿಗೆ….ದೇವರನ್ನು ನಂಬದೇ ಹುತ್ತ ಕಿತ್ತ ಹತ್ತಾರು ಮಂದಿಗೆ ಅಗೋಚರ ರೀತಿಯಲ್ಲಿ ಸಂಕಷ್ಟ ಎದುರಾಗಿದ್ದರ ಪರಿಣಾಮವಾಗಿ ಇಂದು ಹತ್ತಿರ ಹೋಗಲು ಭಯಬೀಳುತ್ತಿರೋ ಗ್ರಾಮಸ್ಥರು ಮತ್ತು ಮನೆಯ ಮಾಲೀಕರ ಸಂಬಂಧಿಗಳು….

8ವರ್ಷದ ಹಿಂದೆ ಈ ಹೊಸ ಕನಸಿನ ಮನೆಯ ನಿರ್ಮಾಣಕ್ಕೆ ಕೆಲಸ ಶುರು ಮಾಡಿದ ದಿನದಿಂದ ಇಲ್ಲಿಯವರೆಗೂ ಅನೇಕ ಕಷ್ಟ-ಕೋಟಲೆಗಳಿಂದ ಬೆಂದುಹೋಗಿದೆ ಈ ಕುಟುಂಬ….!ಮೊದಲು 2 ಎಕರೆ ಕಬ್ಬು ಬೆಂಕಿಗಾಹುತಿ, ನಂತರ ಬೆಂಕಿಗೆ 30-40 ತೆಂಗಿನ ಮರಗಳು ಆಹುತಿ, ನಂತರ ಅನಾರೋಗ್ಯಕ್ಕೀಡಾದ ಕುಟುಂಬಸ್ಥರು…!ಮನೆಯ ದಕ್ಷಿಣಾ ದಿಕ್ಕಿನಲ್ಲಿ ಮೂಡುತ್ತಿರೋ ಹುತ್ತ ಅದೇ ಭಾಗದಲ್ಲಿ ಕಟ್ಟಿಕೊಂಡಿವೆ ಜೇನು ಗೂಡು ಮತ್ತು ಕಾಡು ಪಾರಿವಾಳದ ಗೂಡು…..!ಮೊದಲು ಅಡುಗೆ ಮನೆಯಲ್ಲಿ ನಂತರ ದೇವರ ಮನೆ ಮುಂಭಾಗ ಮೂಡಿದ ಹುತ್ತ….!ನಿಶಬ್ದ್ಯದ ಸಂದರ್ಭದಲ್ಲಿ ವೀಡಿಯೋ ಚಿತ್ರಿಕರಣ ಮಾಡಿ ನಂತರ ವೀಡಿಯೋ ವೀಕ್ಷಣೆ ಮಾಡಿದರೆ ಹುತ್ತದಿಂದ ಗೆಜ್ಜೆ ಸೌಂಡು ಕೇಳುತ್ತಿರೋದು ಸೃಷ್ಠಿಸಿದೆ ಅಚ್ಚರಿ.

ಈ ಹುತ್ತದಿಂದ ಮಹೇಶ್ ಮನೆಯವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ.ಹುತ್ತವನ್ನು ಮನೆಯಿಂದ ಹೊರಹಾಕಲು ಎಷ್ಟೋ ಬಾರಿ ಪ್ರಯತ್ನವನ್ನು ಮಾಡಿದ್ದಾರೆ.ನಾಗದೋಷ ಪೂಜೆಗಳನ್ನು ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ವಿಶೇಷ ಪೂಜೆ ಕೂಡ ಮಾಡಿಸಿದರು.ಸುಮಾರು ಎಂಟು ವರ್ಷಗಳ ಹಿಂದೆ ಮನೆ ಕಟ್ಟಲು ಆರಂಭಿಸಿದ ಮಹೇಶ್ ಅವರಿಗೆ ಇದುವರೆಗೂ ಈ ಮನೆ ಪೂರ್ಣಗೊಳಿಸಲು ಸಾಧ್ಯವೇ ಆಗಿಲ್ಲ.ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ಈ ಹುತ್ತ ಬೆಳೆಯುತ್ತಲೇ ಇದೆ.ಈ ಮನೆಯ ನಿರ್ಮಾಣಕ್ಕಾಗಿ ಸುಮಾರು ಅರುವತ್ತು ಲಕ್ಷ ವ್ಯಯಿಸಿದರೂ ಕೂಡ ಇನ್ನೂ ಈ ಮನೆಯನ್ನು ಪೂರ್ಣ ಮಾಡಲಾಗಿಲ್ಲ.ಹುತ್ತವನ್ನು ಹೊಡೆದು ಮನೆಕೆಲಸ ಪ್ರಾರಂಭಿಸಿದರೆ ಸಾಕು ಮನೆಯವರಿಗೆ ಅನಾರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿ ಎದುರಾಗುತ್ತಿದೆ.ಹುತ್ತವನ್ನು ಹೊಡೆದಾಗ ಹುಣ್ಣಿಮೆಯ ಸಂದರ್ಭದಲ್ಲಿ ನಾಗರಹಾವು ಪ್ರತ್ಯಕ್ಷ ಆಗುತ್ತದೆ.ಹೀಗಾಗಿ ಇಂದಿಗೂ ರೈತ ಮಹೇಶ್ ಮನೆಯಲ್ಲಿ ವಿಚಿತ್ರ ಎದುರಾಗುತ್ತಿದೆ.ಈ ಹುತ್ತದಿಂದಾಗಿ ತಮ್ಮ ಕನಸಿನ ಮನೆ ಪೂರ್ಣಗೊಳಿಸಲಾಗದೆ ಮಹೇಶ್ ಅವರು ಚಿಂತೆಗೀಡಾಗಿದ್ದಾರೆ.ಯಾವುದೇ ಪೂಜೆ ಪುರಸ್ಕಾರ ಕೈಗೊಂಡರೂ ಕೂಡ ತೊಂದರೆ ತಪ್ಪಿಲ್ಲ.ಇದು ಯಾರ ಶಾಪವೋ ಏನೋ ಒಂದೂ ತಿಳಿಯದಾಗಿದೆ ಎಂದು ಮಹೇಶ್ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

1 COMMENT

LEAVE A REPLY

Please enter your comment!
Please enter your name here