ಸ್ವಂತ ಮನೆ ಇರಬೇಕೆಂಬುದು ಪ್ರತಿಯೊಬ್ಬರ ಕನಸು. ಚಿಕ್ಕದೋ, ದೊಡ್ಡದೋ ಆದರೆ ತಮ್ಮದೆಂಬ ಒಂದು ಸೂರು ಬದುಕಿಗೆ ಭದ್ರತೆ ನೀಡುವುದು. ಅದಕ್ಕಾಗಿಯೇ ಹಣವನ್ನು ಉಳಿಸಿ, ಬ್ಯಾಂಕ್ ನಲ್ಲಿ ಸಾಲ ಪಡೆದು ಹೀಗೆ ವಿವಿಧ ಪ್ರಯತ್ನಗಳ ಮೂಲಕ ಮನೆ ಕಟ್ಟಿಸಲು ಮುಂದಾಗುತ್ತಾರೆ. ಆದರೆ ಕೆಲವರಿಗೆ ಮಾತ್ರ ಆರ್ಥಿಕವಾಗಿ ಎದುರಾಗುವ ತೊಂದರೆಗಳಿಂದ ಮನೆ ಕಟ್ಟಿಸುವ ಕನಸು ಕನಸಾಗಿಯೇ ಉಳಿದು ಬಿಡುತ್ತದೆ. ಆದರೆ ಈ ಕನಸನ್ನು ನನಸು ಮಾಡುವ ಆಲಯವೊಂದು ಇದ್ದು, ಇಲ್ಲಿ ನೆಲೆಸಿರುವ ದೇವನು ಮನೆ ಕಟ್ಟಿಸುವ ನಮ್ಮ ಕನಸನ್ನು ನನಸು ಮಾಡುವನು ಎಂಬುದು ಅನೇಕ ಭಕ್ತರ ನಂಬಿಕೆ.

ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆಯಿಂದ 18 ಕಿಮೀ ದೂರದಲ್ಲಿರುವ ಊರು ಕಲ್ಲಹಳ್ಳಿಯ ದೇವಾಲಪುರ ಗ್ರಾಮದಲ್ಲಿರುವ ವಿಶೇಷ, ಪವಾಡಗಳಿಗೆ ಕಾರಣವಾಗಿರುವ ವರಾಹ ಸ್ವಾಮಿ ಆಲಯವೇ ಮನೆ ಕಟ್ಟುವ ಕನಸುಳ್ಳವರ ಪ್ರಯತ್ನಕ್ಕೆ ದೇವರು ಹರಸುವನು ಎಂದೇ ಇಲ್ಲಿನ ಪ್ರತೀತಿ. ಇಲ್ಲಿ ನೆಲೆಸಿರುವ ಭೂ ವರಾಹ ಸ್ವಾಮಿಯವರಿಗೆ ಹರಕ್ಕೆ ಹೊತ್ತು ಭಕ್ತಿ ಶ್ರದ್ಧೆಯಿಂದ ಬೇಡಿಕೊಂಡರೆ ಭೂಮಿಗೆ ಸಂಬಂಧಿಸಿದ ಯಾವುದೇ ವಿವಾದಗಳಾದರೂ ಬಹು ಬೇಗ ನಿವಾರಣೆಯಾಗುತ್ತದೆ ಹಾಗೂ ಇಲ್ಲಿ ಮರಳು ಮತ್ತು ಇಟ್ಟಿಗೆಯನ್ನು ಪೂಜೆ ಮಾಡಿಸಿ ಅದನ್ನು ಬಳಸಿದರೆ ಮನೆ ಕಟ್ಟುವ ಕಾರ್ಯ ಶುಭಪ್ರದವಾಗಿ ನಡೆಯುತ್ತದೆ ಎಂಬುದು ಪ್ರತೀತಿ.

ಹೊಯ್ಸಳರ ಕಾಲದ ಮುಮ್ಮಡಿ ಕೃಷ್ಣ ಬಲ್ಲಾಳನ ಅಧಿಕಾರಾವಧಿಯಲ್ಲಿ ಭೂ ವರಾಹ ಸ್ವಾಮಿಯ 15 ಅಡಿ ಎತ್ತರದ ಮೂರ್ತಿಯನ್ನು ಕೆತ್ತಲಾಯಿತು. ಇದು ಕೃಷ್ಣ ವರ್ಣದ ಸಾಲಿಗ್ರಾಮ ಶಿಲೆಯಾಗಿದ್ದು, ಸ್ವಾಮಿ ಅವರು ತನ್ನ ತೊಡೆಯ ಮೇಲೆ ಭೂದೇವಿಯನ್ನು ಕೂರಿಸಿಕೊಂಡು ಭಕ್ತರಿಗೆ ದರ್ಶನವನ್ನು ‌ನೀಡುವರು. ರಾಜ್ಯದ ಮೂಲೆ ಮೂಲೆಯಿಂದ ಆಲಯಕ್ಕೆ ಬರುವ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಲು ಇಲ್ಲಿ ಭೂವರಾಹ ಸ್ವಾಮಿಯವರನ್ನು ಭಕ್ತಿ ಶ್ರದ್ಧೆಯಿಂದ ಆರಾಧಿಸಿ ಕೃತಾರ್ಥರಾಗುತ್ತಾರೆ. ಈ ಆಲಯ ಪ್ರತಿ ದಿನ ಕೂಡಾ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2, ಸಂಜೆ 4 ರಿಂದ 7 ವರೆಗೆ ತೆರೆದಿರುತ್ತದೆ.

 

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here