ಕರ್ನಾಟಕದ ಮಾನ್ಯ ಮುಖ್ಯ ಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಬಡ ಕುಟುಂಬದ ಬಾಲಕಿಯೊಬ್ಬಳಿಗೆ ಶಸ್ತ್ರ ಚಿಕಿತ್ಸೆಗಾಗಿ ಧನಸಹಾಯವನ್ನು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಕುಮಾರ ಸ್ವಾಮಿ ಅವರು ನೀಡಿದ ಮಾತಿನಂತೆ ನಡೆದುಕೊಂಡು ಆ ಬಾಲಕಿಯ ಜೀವನವನ್ನು ಹಸನು ಮಾಡಿದ್ದು, ಒಂದೊಳ್ಳೆ ಭವಿಷ್ಯ ನಿರ್ಮಾಣಕ್ಕೆ ಅವರು ತಮ್ಮಿಂದ ಆದ ಸಹಾಯವನ್ನು ಮಾಡಿದ್ದಾರೆ. ಲೋಕ ಸಮರದ ಸಂದರ್ಭದಲ್ಲಿ ಸಿಎಂ ಅವರು ಕೆ.ಆರ್.ಎಸ್. ನಲ್ಲಿ ವಾಸ್ತವ್ಯವನ್ನು ಹೂಡಿದ್ದರು. ಆ ಸಮಯದಲ್ಲೊಂದು ಬಡ ಕುಟುಂಬ ಸಿಎಂ ಅವರ ಬಳಿಗೆ ಮನವಿಯೊಂದಿಗೆ ಬಂದಿದೆ.

ಶ್ರೀರಂಗಪಟ್ಟಣ ತಾಲೂಕಿನ ಆನಂದೂರು ಎಂಬ ಗ್ರಾಮದ ನಿವಾಸಿ ಕುಮಾರ್ ಅವರು ತಮ್ಮ‌ ಕೊನೆಯ ಮಗಳಾದ ರಿಯಾಂಜಲಿಯ ಬಲಗೈ ಶಸ್ತ್ರ ಚಿಕಿತ್ಸೆಗೆ ಧನ ಸಹಾಯ ಮಾಡಬೇಕೆಂದು ಮುಖ್ಯಮಂತ್ರಿ ಅವರಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದರು. ಮಗ ನಿಖಿಲ್ ಕುಮಾರ ಸ್ವಾಮಿಯವರ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಸಿಎಂ ಅವರು ಸಹಾಯ ಮಾಡುವ ಭರವಸೆಯನ್ನು ನೀಡಿದ್ದರು. ಅದಾದ ನಂತರ ಚುನಾವಣೆಯ ಒತ್ತಡದಲ್ಲಿ ಅವರು ನೀಡಿದ್ದ ಭರವಸೆಯನ್ನು ಮರೆಯದೆ ಆ ಬಡ ಕುಟುಂಬಕ್ಕೆ ಸಹಾಯಹಸ್ತವನ್ನು ಚಾಚಿದ್ದಾರೆ.

ಕುಮಾರ ಸ್ವಾಮಿ ಅವರು ಏಪ್ರಿಲ್ 10 ರಂದು ಆ ಕುಟುಂಬವನ್ನು ತಮ್ಮ ಮನೆಗೆ ಕರೆಸಿಕೊಂಡು ಅವರ ಜೊತೆ ಮಾತನಾಡಿ ,ನಂತರ ಆಪರೇಶನ್ ಗಾಗಿ ಅವಶ್ಯಕತೆ ಇದ್ದ ಸುಮಾರು 2 ಲಕ್ಷ ರೂಪಾಯಿಗಳ ವೆಚ್ಚವನ್ನು ಸಿಎಂ ಅವರೇ ಭರಿಸಿದ್ದಾರೆ. ಹುಟ್ಟಿನಿಂದಲೇ ಬಲಗೈ ಸ್ವಾಧೀನ ಕಳೆದುಕೊಂಡಿದ್ದ ರಿಯಾಂಜಲಿಯು ಶಸ್ತ್ರ ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾಳೆ. ಬಾಲಕಿಯ ಇಡೀ ಕುಟುಂಬ ಮುಖ್ಯಮಂತ್ರಿ ಅವರು ಮಾಡಿದ ಸಹಾಯವನ್ನು ಸ್ಮರಿಸುತ್ತಾ , ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here