ಮಂಡ್ಯ ಜಿಲ್ಲೆಯನ್ನು ಕಾಪಾಡಿ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರವೊಂದನ್ನು ಬರೆಯಲಾಗಿದೆ. ಯಾರು ಈ ಪತ್ರ ಬರೆದವರು, ವಿರೋಧಿ ಪಾಳೆಯದವರೆ, ಯಾರಾದರೂ ಸಮಾಜ ಸೇವಕರೆ? ಎಂಬ ಅನುಮಾನ ಬಂದರೆ ಅವರಾರು ಅಲ್ಲ ಬದಲಾಗಿ ಜೆಡಿಎಸ್ ನ ಪ್ರಮುಖ ಶಾಸಕ ಹಾಗೂ ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡ ಅವರೇ ಈ ಪತ್ರವನ್ನು ಬರೆದಿರುವುದು. ಅವರು ತಮ್ಮ ಪತ್ರದ ಮೂಲಕ ಮಂಡ್ಯದ ಬಗ್ಗೆ ಮುಖ್ಯಮಂತ್ರಿ ಅವರ ಗಮನವನ್ನು ಸೆಳೆಯುವ ಪ್ರಯತ್ನವನ್ನು ಮಾಡಿದ್ದಾರೆ. ತಮ್ಮ ಪತ್ರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇನ್ನು ಅವರು ಪತ್ರದಲ್ಲಿ ಏನು ಬರೆದಿದ್ದಾರೆ ಎಂಬುದನ್ನು ತಿಳಿಯೋಣ.

ಅವರು ತಮ್ಮ ಪತ್ರದಲ್ಲಿ ಮಂಡ್ಯದಲ್ಲಿ ಆಡಳಿತ ಸೂತ್ರ ಹರಿದು ಹೋದ ಗಾಳಿಪಟದಂತೆ ಆಗಿದೆ ಎಂದಿದ್ದು, ಪೆಟ್ಟಿಗೆ ಅಂಗಡಿಯಲ್ಲಿ ಕೂಡಾ ಲಿಕ್ಕರ್ ದಂಧೆ ಎಗ್ಗಿಲ್ಲದೆ ನಡೆದಿದೆ ಎಂದು ದೂರಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಯುವಕರು ಹಾಳಾಗುತ್ತಿದ್ದಾರೆ ಎಂದಿರುವ ಅವರು, ಮಂಡ್ಯದ ಮೇಲೆ ಕಲ್ಲೆಸೆದರೆ ಅದು ನರ್ಸಿಂಗ್ ಹೋಂ ಮೇಲೆ ಬೀಳುತ್ತದೆ ಎಂಬ ಮಾತಿತ್ತು, ಆದರೆ ಈಗ ಅದು ಬಾರಿನ ಮೇಲೆ ಬೀಳುತ್ತದೆ ಎನ್ನುವಂತಾಗಿದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಸರ್ಕಾರಿ ಅಧಿಕಾರಿಗಳು ತಮ್ಮ ಏಜೆಂಟರನ್ನು ನೇಮಕ ಮಾಡಿಕೊಂಡು ಕಾರ್ಯಕ್ಕೆ ಇಳಿದಿದ್ದಾರೆ.

ಜಿಲ್ಲೆಯ ಅಬಕಾರಿ ಇಲಾಖೆ ಸತ್ತಿದೆ. ನಿರುದ್ಯೋಗ ಸಮಸ್ಯೆ ಬಾಧಿಸುತ್ತಿದೆ. ಕ್ರಿಕೆಟ್ ಬೆಟ್ಟಿಂಗ್ ಗ್ರಾಮದಿಂದ ಹಿಡಿದು ಎಲ್ಲಾ ಕಡೆ ಅವ್ಯಾಹತವಾಗಿ ನಡೆದಿದೆ ಎಂದು ಹಲವು ಸಮಸ್ಯೆಗಳ ಕುರಿತಾಗಿ ಸವಿವರವಾಗಿ ಅವರು ಪತ್ರವನ್ನು ಬರೆದಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ನಮ್ಮ ಸಕ್ಕರೆ ಜಿಲ್ಲೆಯ ಅಭಿವೃದ್ಧಿಯ ಹರಿಕಾರರೂ, ನಾಡಿನ ಹೆಮ್ಮೆಯ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರಲ್ಲಿ ನನ್ನ ವಿನಮ್ರ ಮನವಿ ಎಂದು ಟ್ವೀಟ್ ಮಾಡಿ ತಮ್ಮ ಪತ್ರದ ಫೋಟೋಗಳನ್ನು ಶಿವರಾಮೇಗೌಡ ಅವರು ಹಂಚಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here