ಮಂಡ್ಯ ಲೋಕಸಭೆ ಚುನಾವಣೆಯಲ್ಲಿ 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಶುಕ್ರವಾರ ಕೆ.ಆರ್. ಪೇಟೆಯಲ್ಲಿ ನಡೆದ ಪುರಸಭೆ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ಹೇಳಿಕೆ ನೀಡಿದ ನಿಖಿಲ್, “ಇದೇ ತಿಂಗಳ 23 ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದ್ದು, ಜನರ ತೀರ್ಪು ನನ್ನ ಪರವಾಗಿರಲಿದೆ ಎಂಬ ವಿಶ್ವಾಸವಿದೆ. ಚುನಾವಣಾ ಸಮೀಕ್ಷೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ, 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ. ಅಲ್ಲದೆ ನಾನು ಸೋತರೂ ಗೆದ್ದರೂ ಮಂಡ್ಯದಲ್ಲೇ ಇರ್ತೀನಿ. ಇಲ್ಲೆ ಮನೆ ಮಾಡ್ತೀನಿ” ಎಂದು ತಿಳಿಸಿದ್ದಾರೆ.

ಸಮೀಕ್ಷೆಗಳು ಏನೇ ಇರಲಿ ನನಗಂತೂ ನನ್ನ ಗೆಲುವಿನ ಬಗ್ಗೆ ವಿಶ್ವಾಸವಿದೆ. ಮಾಧ್ಯಮದವರು ರೆಸ್ಟ್​ ಮೂಡ್​ ಎನ್ನುತ್ತಾರೆ. ಆದರೆ, ನಾನು ಈಗಾಗಲೇ ಕೆಲಸ ಪ್ರಾರಂಭಿಸಿದ್ದೇನೆ. ಚುನಾವಣೆ ಸಮಯದಲ್ಲಿ ಹೇಳಿದಂತೆ ಸ್ಮಾರ್ಟ್​ ಸ್ಕೂಲ್​, ಉದ್ಯೋಗ ಸೃಷ್ಟಿಯ ಬಗ್ಗೆ ಈಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಗೆದ್ದ ಒಂದೇ ವಾರದಲ್ಲಿ ನಾನು ಹೇಳಿದ ಯೋಜನೆಗಳೆಲ್ಲ ಟೇಕ್ ಆಫ್​ ಆಗುತ್ತವೆ. ನಾನು ಕಾಂಗ್ರಸ್​ನ ಹಿರಿಯ ನಾಯಕರ ಆಶೀರ್ವಾದದೊಂದಿಗೆ ಚುನಾವಣೆ ಎದುರಿಸಿದ್ದೇನೆ.ಜತೆಗೆ ನಮ್ಮ ಜೆಡಿಎಸ್​ ಪಕ್ಷದ ಎಲ್ಲ ಕಾರ್ಯಕರ್ತರು, ಶಾಸಕ, ಸಚಿವರು 45 ದಿನ ನನ್ನ ಪರವಾಗಿ ಅವಿರತ ದುಡಿದಿದ್ದಾರೆ. ನಾವಂತೂ ಮೈತ್ರಿ ಧರ್ಮ ಪಾಲನೆ ಮಾಡಿದ್ದೇವೆ.

ಮಾಡದವರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸುಮಲತಾ ಅವರಿಗೆ ಬೆಂಬಲ ನೀಡಿದ ಕಾಂಗ್ರೆಸ್​ ಮುಖಂಡರಿಗೆ ಪರೋಕ್ಷವಾಗಿ ಟಾಂಗ್​ ನೀಡಿದರು.ಇನ್ನು ಚುನಾವಣೆ ಸಮಯದಲ್ಲಿ ಫೇಮಸ್​ ಆಗಿದ್ದ ‘ನಿಖಿಲ್​ ಎಲ್ಲಿದೀಯಪ್ಪಾ?’ ಡೈಲಾಗ್​ ಬಗ್ಗೆ ನಿಖಿಲ್​ ಕುಮಾರಸ್ವಾಮಿ ನಗುತ್ತಲೇ ಮಾತನಾಡಿದರು.ನನ್ನ ವಿರೋಧಿಗಳು ನನ್ನನ್ನು ಹೀಯಾಳಿಸಲು ಪ್ರಾರಂಭಿಸಿದ್ದು ನನಗೆ ವರವಾಯ್ತು. ನಾನು ಆ ಡೈಲಾಗ್​ನಿಂದಲೇ ಪ್ರಸಿದ್ಧಿಯಾದೆ. ಅಮೆರಿಕದಲ್ಲೂ ಅದು ಫೇಮಸ್​ ಆಗಿದೆಯಂತೆ. ಈ ಟೈಟಲ್​ಗೆ ಫಿಲ್ಮ್​ ಚೇಂಬರ್​ನಲ್ಲಿ ಬೇಡಿಕೆಯಿದೆಯಂತೆ. ಆದರೆ, ಅದನ್ನು ಯಾರಿಗೂ ಕೊಡಬೇಡಿ. ಅದು ನನ್ನ ಟೈಟಲ್​ ನಾನೇ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದೇನೆ. ಈಗ ಪುಟ್ಟರಾಜಣ್ಣನೇ ನಿರ್ಮಾಪಕರಾಗುತ್ತಾರಂತೆ ಎಂದು ಜೋರಾಗಿ ನಗುತ್ತ ಹೇಳಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here