ಹೈ ವೋಲ್ಟೇಜ್ ಕ್ಷೇತ್ರ ಮಂಡ್ಯ ಲೋಕ ಸಭಾ ಕ್ಷೇತ್ರ. ಇಲ್ಲಿ ಈವರೆಗೂ ಮೈತ್ರಿ ಅಭ್ಯರ್ಥಿಯಾದ ಜೆಡಿಎಸ್ ನ ನಿಖಿಲ್ ಕುಮಾರ್ ಸ್ವಾಮಿ ಅವರು ಸುಮಾರು ಎರಡು ಸಾವಿರ ಮತಗಳ ಅಂತರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತ ಅವರನ್ನು ಹಿಂದಿಕ್ಕಿದ್ದರು. ಆದರೆ ಈಗ ಸುಮಲತ ಅವರು ಸುಮಾರು ನೂರು ಮತಗಳ ಅಂತರದಲ್ಲಿ ನಿಖಿಲ್ ಅವರನ್ನು ಹಿಂದಿಕ್ಕಿದ್ದಾರೆ. ಅಲ್ಲದೆ ಈ ಬಾರಿ ಮಂಡ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ಕಾರಣ ಸುಮಲತ ಹೆಸರಿನ ಮೂರು ಅಭ್ಯರ್ಥಿಗಳು ಇದ್ದುದ್ದರಿಂದ ಅವರಿಗೆ ಎಷ್ಟು ಮತ ಬಂದಿರಬಹುದು ಎಂಬುದು ಕೂಡಾ ಎಲ್ಲರ ಕುತೂಹಲ ಕೆರಳಿಸಿದೆ.

ಮಂಡ್ಯದಲ್ಲಿ ಈಗ ನಡೆಯುತ್ತಿರುವ ಕೌಂಟಿಂಗ್ ಆಧಾರದಲ್ಲಿ ನೋಡಿದರೆ ನೆಕ್ ಟು ನೆಕ್ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದೇ ರೀತಿ ಮುಂದುವರೆದರೆ ಕೊನೆ ಹಂತದವರೆಗೂ ರೋಚಕತೆ ಇರುತ್ತದೆ. ಈಗ ಸುಮಲತ ಅವರು 525ಮತಗಳ ಮುನ್ನಡೆಯನ್ನು ಸಾಧಿಸಿದ್ದಾರೆ ಮೈತ್ರಿ ಅಭ್ಯರ್ಥಿ ನಿಖಿಲ್ ಅವರ ವಿರುದ್ದ ಎಂಬ ಮಾಹಿತಿ ದೊರೆತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here