ರಾಜ್ಯದಲ್ಲಿ ಇತ್ತೀಚಿಗೆ ತಾನೆ ರೈತರ ಸಾಲ ಮನ್ನಾ ಆಗಿದ್ದರೂ ಸಹ ರೈತರ ಆತ್ಮಹತ್ಯೆ ಮಾತ್ರ ನಿಂತೇ ಇಲ್ಲ. ಕೆಲ ಸಾಲ ಕೊಟ್ಟ ಸಾಲಗಾರರ ಕಿರುಕಳ ತಾಳಲಾರದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಮುಂದುವರಿದಿದೆ. ಮಂಡ್ಯದ ಒಂದೇ ಕುಟುಂಬದ ನಾಲ್ಕು ಜನರು ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಇಂದುಬ ನಡೆದಿದೆ‌ . ಪಾಂಡವಪುರ ತಾಲೂಕಿನ ಸುಂಕತಣ್ಣೂರು ಗ್ರಾಮದ ನಿವಾಸಿ ನಂದೀಶ್ (35), ಅವರ ಪತ್ನಿ ಕೋಮಲಾ (25), ಮಕ್ಕಳಾದ ಚಂದನಾ (10), ಮೀನಾ (13) ಆತ್ಮಹತ್ಯೆಗೆ ಶರಣಾದವರು. ಈ ಕುಟುಂಬದ ಆತ್ಮಹತ್ಯೆ ಬಗ್ಗೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆತ್ಮಹತ್ಯೆ ಬಗ್ಗೆ ತನಿಖ ಆರಂಭಿಸಿದ್ದಾರೆ.

ನಂದೀಶ್ ಬ್ಯಾಂಕ್ ಸೇರಿದಂತೆ ವಿವಿಧೆಡೆ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಸಾಲಗಾರರು ಮನೆಗೆ ಬಂದು ಮರುಪಾವತಿಸುವಂತೆ ಕೇಳಿದ್ದರು. ಇದರಿಂದ ಮನನೊಂದ ನಂದೀಶ್ ಅವರು ತನ್ನ ಇಬ್ಬರು ಮಕ್ಕಳು ಹಾಗೂ ಪತ್ನಿಗೆ ವಿಷ ಉಣಿಸಿ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಸಾಲದ ಸಮಸ್ಯೆಯನ್ನು ನಂದೀಶ್ ಅವರು ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ಅವರ ಗಮನಕ್ಕೆ ತಂದಿದ್ದರು.

ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತು ತಮ್ಮ ತೋಟದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪಾಂಡವಪುರ ಪೊಲೀಸರು ತಿಳಿಸಿದ್ದಾರೆ.ಸುಂಕಾತೊಣ್ಣೂರು ಗ್ರಾಮದ ನಂದೀಶ್ ಕುಟುಂಬ, ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿದೆ. ನಂದೀಶ್ (35), ಪತ್ನಿ ಕೋಮಲಾ (28), ಮಕ್ಕಳಾದ ಚಂದನ್ (10), ಮನು (13) ಆತ್ಮಹತ್ಯೆ ಮಾಡಿಕೊಂಡವರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here