ಲೋಕಸಭಾ ಚುನಾವಣೆಯ ಫಲಿತಾಂಶವು ಇನ್ನು ಕೆಲವೇ ದಿನಗಳಿವೆ. ಅದರಲ್ಲೂ ಮಂಡ್ಯದಿಂದ ಚುನಾವಣಾ ಕಣಕ್ಕಿಳಿದವರ ಚುನಾವಣಾ ಫಲಿತಾಂಶದ ಬಗ್ಗೆ ತಿಳಿಯಲು ಎಲ್ಲರೂ ಕಾತರರಾಗಿದ್ದಾರೆ. ಫಲಿತಾಂಶ ಹತ್ತಿರವಾಗುತ್ತಿರುವ ಈ ಸಮಯದಲ್ಲಿ , ಚುನಾವಣಾ ಪ್ರಚಾರದ ವೇಳೆ ಆಯಿತೆನ್ನಲಾಗಿರುವ ಒಂದು ತಪ್ಪನ್ನು ಕುರಿತು ಸುಮಲತ ಅಂಬರೀಶ್ ಅವರ ಬೆಂಬಲಿಗರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅವರು ಆಕ್ರೋಶ ವ್ಯಕ್ತಪಡಿಸಿರುವುದಾದರೂ ಯಾರ ಬಗ್ಗೆ ಅಂದ್ರೆ ಅದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ವಿರುದ್ಧ.
ಚುನಾವಣಾ ಸಂದರ್ಭದಲ್ಲಿ ಸುಮಲತ ಅವರ ಪರವಾಗಿ ನಿಂತ ರಾಕ್ ಲೈನ್ ವೆಂಕಟೇಶ್ ಅವರ ವಿರುದ್ದ ಏಕೆ ಆಕ್ರೋಶ ಹೊರಹಾಕಿದ್ದಾರೆಂಬುದರ ಕಾರಣ ಇಲ್ಲಿದೆ.

ಚುನಾವಣೆ ಸಂದರ್ಭದಲ್ಲಿ ರಾಕ್ ಲೈನ್ ವೆಂಕಟೇಶ್ ಅವರು ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಚುನಾವಣಾ ಸಂದರ್ಭದಲ್ಲಿ ಸುಮಲತ ಅವರ ಖರ್ಚು ವೆಚ್ಚಗಳ ಜವಾಬ್ದಾರಿಯನ್ನು ರಾಕ್ ಲೈನ್ ವೆಂಕಟೇಶ್ ಅವರು ವಹಿಸಿಕೊಂಡಿದ್ದರು‌. ಆ ಸಂದರ್ಭದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಕೆಲವು ವಾಹನಗಳನ್ನು ಬಾಡಿಗೆಗೆ ತರಿಸಿಕೊಳ್ಳಲಾಗಿತ್ತು‌. ಆದರೆ ಆ ವಾಹನಗಳ ಬಾಡಿಗೆಯನ್ನು ನೀಡಿಲ್ಲ ಎಂಬುದೇ ಈಗ ರಾಕ್ ಲೈನ್ ವೆಂಕಟೇಶ್ ಅವರ ಮೇಲೆ ಮಾಡಿರುವ ವಂಚನೆಯ ಆರೋಪವಾಗಿದೆ.

ಪ್ರಚಾರಕ್ಕೆ ಬಳಸಿದ ವಾಹನದ ಬಾಡಿಗೆ ಕೊಟ್ಟಿಲ್ಲ. ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಎಂಬುದಾಗಿ ಆರೋಪ ಮಾಡಲಾಗಿದೆ. ಸ್ವಾಭಿಮಾನಕ್ಕಾಗಿ ಸತ್ಯಾಗ್ರಹ ಎಂಬ ವಾಟ್ಸಾಪ್ ಗ್ರೂಪಿನಲ್ಲಿ ಈ ವಿಷಯದ ಚರ್ಚೆ ನಡೆದಿದ್ದು, ವಾಹನಗಳ ಬಾಡಿಗೆ ಹಣವನ್ನು ಕೊಡಿ ಎಂದು ಆಗ್ರಹಿಸಿದ್ದಾರೆ. ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಮಲತ ಅಂಬರೀಶ್ ಅವರ ಬೆಂಬಲಿಗರು ರಾಕ್ ಲೈನ್ ವೆಂಕಟೇಶ್ ಅವರಿಗೆ ಚುನಾವಣೆ ಹೊಸದು, ಸ್ವಲ್ಪ ಸಾವಧಾನದಿಂದ ಇರಿ ಎಂದು ಕಾರ್ಯಕರ್ತರನ್ನು ಸಮಾಧಾನ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here