
ಮುಂಜಾನೆ ಎದ್ದು ಹೊಲಗದ್ದೆಯಲ್ಲಿ ರೈತನಾಗಿ ಕೆಲಸ ಮಾಡಿ ನಂತರ ಮಧ್ಯಾಹ್ನ ಆಗುತ್ತಿದ್ದಂತೇ ತನ್ನ ಚಿಕ್ಕದಾದ ಆಸ್ಪತ್ರೆಗೆ ದಾಖಲಾದ ಎಂಟ್ರಿ. ಅದು ಯಾವುದೇ ರೀತಿಯ ಜನರು ಬರಲಿ ಅವರಿಗೆ ಕೇವಲ ಐದು ರೂಪಾಯಿಯಲ್ಲಿ ಚಿಕಿತ್ಸೆ ನೀಡಿ ಕಾಯಿಲೆಯನ್ನು ಗುಣಪಡಿಸುವ ಮಂಡ್ಯದ ಡಾ ಶಂಕರೇಗೌಡ ನಿಸ್ಸಂದೇಹವಾಗಿ ದೇಶದ ದಂತಕಥೆ.
ಚರ್ಮ ಮತ್ತು ಲೈಂಗಿಕ ರೋಗ ತಜ್ಞರಾಗಿ ಹತ್ತಾರು ವರ್ಷಗಳಿಂದ ನಿರಂತರವಾಗಿ ಬಡ ಜನರಿಗೆ ಅನುಕೂಲವಾಗುವಂತೆ ಸೇವೆ ಸಲ್ಲಿಸುತ್ತಿರುವ ಶಂಕರೇಗೌಡರು 5 ರೂಪಾಯಿ ಡಾಕ್ಟರ್ ಎಂದೇ ಚಿರಪರಿಚಿತರು. ಇವರು ಸ್ವಗ್ರಾಮ ಶಿವಳ್ಳಿಯಲ್ಲಿ ಉಚಿತವಾಗಿ ರೋಗಿಗಳನ್ನು ಪರೀಕ್ಷೆ ಮಾಡ್ತಾರೆ. ಮಂಡ್ಯದ ತಮ್ಮ ಕ್ಲೀನಿಕ್ನಲ್ಲಿ ಮಾತ್ರ ಪ್ರತಿಯೊಬ್ಬರಿಗೆ 5 ರೂಪಾಯಿ ಪಡೆಯುತ್ತಾರೆ.
ಓದಿದ್ದು M.B.B.S , M.D
ಚರ್ಮ ರೋಗದ ಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದವರು. ಶಿವಳ್ಳಿ ಗ್ರಾಮದವರಾದ ಇವರು ಬೆಳಿಗ್ಗೆ ತಮ್ಮ ಗ್ರಾಮದಲ್ಲಿ ಮತ್ತು ಮಧ್ಯಾಹ್ನ ಮಂಡ್ಯದ ತಮ್ಮ ಚಿಕಿತ್ಸಾಲಯದಲ್ಲಿ ರೋಗಿಗಳಿಗೆ ಕೇವಲ 5 ರೂ ಪಡೆದು ಚಿಕಿತ್ಸೆ ನೀಡುತ್ತಾರೆ.
ಎಷ್ಟೋ ಬಾರಿ 5 ರೂ ಗಳನ್ನು ಸಹ ಪಡೆಯುವುದಿಲ್ಲ. ಖಾಸಗಿ ಆಸ್ಪತ್ರೆ ಮುಷ್ಕರ ಇದ್ದಾಗ ಕೂಡ ಡ ಐದು ರುಪಾಯಿ ವೈದ್ಯ ಎಂದು ಖ್ಯಾತಿಯ ಡಾ.ಶಂಕರೇಗೌಡ ಇದ್ಯಾವುದಕ್ಕೂ ಬೆಂಬಲ ನೀಡದೇ ನಾಲ್ಕು ದಿನಗಳಿಂದಲೂ ನಿರಂತರವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ಮದುವೆ ಆದ ನಂತರ ವಾರಕ್ಕೆ ಭಾನುವಾರ ಮಾತ್ರ ರಜ ತೆಗೆದುಕೊಳ್ಳುವ ಶಂಕರೇಗೌಡರು ಎಷ್ಟೋ ಬಾರಿ ಉಚಿತ ಚಿಕಿತ್ಸೆ ನೀಡುತ್ತಾರೆ.
ಚರ್ಮ, ಕುಷ್ಠ, ಲೈಂಗಿಕ ರೋಗ ತಜ್ಞರಾಗಿರುವ ಡಾ.ಶಂಕರೇಗೌಡ, ಪ್ರತಿನಿತ್ಯದಂತೆ ಬೆಳಗ್ಗೆ ಶಿವಳ್ಳಿಯಲ್ಲಿ ನಂತರ ಮಂಡ್ಯ ನಗರದ ಆರ್.ಪಿ ರಸ್ತೆಯಲ್ಲಿನ ಕ್ಲಿನಿಕ್ನಲ್ಲಿ ಚಿಕಿತ್ಸೆ ನೀಡುತ್ತಲೇ ಬಂದಿದ್ದಾರೆ. ಸಾರ್ವಜನಿಕರಂತೂ ಡಾ.ಶಂಕರೇಗೌಡ ಅವರ ಕಾಯಕವನ್ನು ಹಾಡಿ ಹೊಗಳುತ್ತಿದ್ದಾರೆ.
ಮೂಲತಃ ಕೃಷಿಕ ಕುಟುಂಬಕ್ಕೆ ಸೇರಿದ ಶಂಕರೇ ಗೌಡರು ತಮ್ಮ 6 ಎಕರೆ ಭೂಮಿಯಲ್ಲಿ ಕೃಷಿ ಕೆಲಸದಲ್ಲೂ ತೊಡಗಿದ್ದಾರೆ , ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ. ಕಳದ ಮೂರು ತಿಂಗಳ ಹಿಂದೆ ನಡೆದ ವೈದ್ಯರ ಮುಷ್ಕರದ ವೇಳೆಯೂ ಹರಿದು ಬಂದ ಅಷ್ಟೂ ರೋಗಿಗಳಿಗೆ ಹಗಲಿರುಳೆನ್ನದೆ ಚಿಕಿತ್ಸೆ ನೀಡಿದ್ದರು.ಇವರ ಈ ಕಾರ್ಯಕ್ಕೆ ಇಡೀ ನಾಡಿನ ಜನರೇ ಅಭಿನಂದಿಸಬೇಕು.
ಶಂಕರೇ ಗೌಡರು ರಾಜಕೀಯದಲ್ಲೂ ಆಸಕ್ತಿ ಹೊಂದಿದ್ದು, ರಾಜಕೀಯ ಜನ ಸೇವೆ ಮಾಡಲು ಒಂದೊಳ್ಳೆ ಮಾರ್ಗ ಎಂದು ಭಾವಿಸುತ್ತಾರೆ. ಅಂತೆಯೇ ಜನರು ಸಹ ಇವರನ್ನು ಬಹಳ ಪ್ರೀತಿಸುತ್ತಾರೆ . ಪ್ರಸ್ತುತ ಮಂಡ್ಯ ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷ ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇಲ್ಲಿ ನಂಬಲೇ ಬೇಕಾದ ವಿಷಯವೆನೆಂದರೆ ತಮ್ಮ ಚುನಾವಣಾ ಪ್ರಚಾರಕ್ಕಾಗಿ ಇವರು ಒಂದು ನಯಾ ಪೈಸೆ ಖರ್ಚು ಮಾಡಿಲ್ಲ ,ಪ್ರಚಾರಕ್ಕಾಗಿ ನಿಂತವರು ಗೌಡರನ್ನು ಪ್ರೀತಿಸಿವ ಮಂಡ್ಯ ಜನ.ಶಂಕರೇಗೌಡರ ಈ ಸಾಧನೆಗಳನ್ನು ಕಂಡು ಎಷ್ಟೋ ರಾಜಕೀಯ ಮಂದಿ ಚುನಾವಣೆಗೆ ಟಿಕೇಟ್ ನೀಡಲು ಮುಂದಾಗಿದ್ದರು
ಮುಂದಿನ ದಿನಗಳಲ್ಲಿ ವಿದ್ಯಾವಂತರು ,ಪ್ರಬುದ್ದರು ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿ ಹಾಗೆಯೇ ತಮ್ಮ ಜೀವನವನ್ನು ನಿಸ್ವಾರ್ಥ ಸೇವೆಗೆ ಮುಡಿಪಿಟ್ಟ ಗೌಡರಿಗೆ ಇನ್ನಷ್ಟು ಒಳ್ಳೆಯ ರಾಜಕೀಯ ಭವಿಷ್ಯ ಒದಗಿ ಬರಲಿ ಆ ತರದಲ್ಲಿ ಇನ್ನು ಹೆಚ್ಚು ಜನ ಸೇವೆ ಮಾಡಲಿ.
ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.