ಸಕ್ಕರೆ ನಾಡು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ದಿನ ದಿನಕ್ಕೂ ರಂಗು ಪಡೆಯುತ್ತಿದೆ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರವಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್‌ ನಡುವೆ ನೆಕ್ ಟು ನೆಕ್ ಫೈಟ್ ಏರ್ಪಟ್ಟಿದೆ. ಫುಲ್ ಟಕ್ಕರ್ ಕೊಡುತ್ತಿರುವ ಸುಮಲತಾ ಅವರನ್ನು ಶತಾಯಗತಾಯವಾಗಿ ಮಣಿಸಲು ದಳಪತಿಗಳು ನಾನಾ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಯಾಕಂದ್ರೆ ಮಂಡ್ಯ ಜಿಲ್ಲೆಯಲ್ಲಿ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಮಾತ್ರವಲ್ಲದೇ ಸಿಎಂ ಪುತ್ರ ಆಗಿರುವುದರಿಂದ ಗೆಲ್ಲಲೇ ಬೇಕಾದ ಅನಿವಾರ್ಯ ಇರುವುದರಿಂದ ಕುಮಾರಸ್ವಾಮಿ ಅವರು ಈ ಕ್ಷೇತ್ರವನ್ನು ಪ್ರತಿಷ್ಠಯಾಗಿ ತೆಗೆದುಕೊಂಡಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತ ಅವರ ಸ್ಪರ್ಧೆಯಂತೂ ಬಹಳ ತೀವ್ರವಾಗಿದೆ. ಸುಮಲತ ಅವರು ಅಂಬರೀಶ್ ಹೆಸರು ಬಳಸದೆ ಪ್ರಚಾರ ಮಾಡಿ ನೋಡೋಣ ಎಂದು ವಿರೋಧಿಗಳಿಗೆ ಸವಾಲು ಹಾಕಿದರೂ, ಅಂಬರೀಶ್ ಹೆಸರು ಹೇಳಿಕೊಂಡು ಅಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಚುನಾವಣೆಯು ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಸುಮಲತ ಹೆಸರಿನ ಇತರೆ ಮೂರು ಜನ ಮಹಿಳೆಯರು ಚುನಾವಣೆಗೆ ನಿಂತಿರುವುದರ ಹಿಂದಿನ ಮರ್ಮ ಏನೆಂಬುದು ಸಾಮಾನ್ಯನಿಗೂ ಬಹಳ ಸುಲಭವಾಗಿ ಅರ್ಥವಾಗುವಂತೆ ಇದೆ.

ಜೆಡಿಎಸ್ ನಾಯಕರ ತಂತ್ರಕ್ಕೆ ಪ್ರತಿಯಾಗಿ ನಯವಾಗಿಯೇ  ಟಾಂಗ್ ಕೊಡುತ್ತಿರುವ ಸುಮಲತಾ ಅಂಬರೀಶ್, ಇದೀಗ ತಮ್ಮ ಚಿಹ್ನೆ ಕೂಡ ರೈತ ಪರವಾಗಿರಬೇಕು ಎಂಬ ಕಾರಣಕ್ಕೆ 3 ಚಿಹ್ನೆಗಳನ್ನ ಸೆಲೆಕ್ಟ್ ಮಾಡಿದ್ದಾರೆ. 1.ಕಬ್ಬಿನ ಗದ್ದೆ ಮುಂದೆ ರೈತ, 2.ತೆಂಗಿನ ತೋಟ, 3.ಕಹಳೆ ಊದುತ್ತಿರುವ ರೈತ ಈ ಮೂರು ಚಿಹ್ನೆಗಳನ್ನ ಸುಮಲತಾ ಅಂಬರೀಶ್ ಸೆಲೆಕ್ಟ್ ಮಾಡಿದ್ದು, ಇವುಗಳ ಪೈಕಿ ಒಂದು ಚಿಹ್ನೆ ನೀಡಬೇಕೆಂದು ಚುನಾವಣಾಧಿಕಾರಿಗೆ ತಿಳಿಸಿದ್ದಾರೆ. ಈ ಮೂಲಕ ತೆನೆ ಹೊತ್ತ ರೈತ ಮಹಿಳೆಗೆ (ಜೆಡಿಎಸ್) ಟಕ್ಕರ್ ಕೊಟ್ಟಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here