ಮಂಡ್ಯದಲ್ಲಿ ನೂತನ ಸಂಸದೆಯಾಗಿರುವವರು ಸುಮಲತಾ ಅಂಬರೀಶ್. ಜನರು ಅವರನ್ನು ಗೆಲ್ಲಿಸಿ ತಮ್ಮ ಸಂಸದೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಆದರೆ ಇಲ್ಲಿನ ಒಂದು ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಸುಮಲತಾ ಅವರ ಹೆಸರನ್ನೇ ಇಲ್ಲಿನ ತಾಲೂಕು ಆಡಳಿತ ಮಂಡಳಿ ಕೈ ಬಿಟ್ಟಿದೆ ಎಂಬ ವಿಷಯ ಈಗ ಎಲ್ಲೆಡೆ ಸುದ್ದಿಯಾಗಿದೆ. ಕೆಂಪೇಗೌಡ ಜಯಂತಿಯ ಅಂಗವಾಗಿ, ಸಮಾರಂಭವನ್ನು ಆಯೋಜನೆ ಮಾಡಲಾಗುತ್ತಿದ್ದು, ಅದಕ್ಕಾಗಿ ತಾಲ್ಲೂಕು ಆಡಳಿತ ಮಂಡಳಿ ಮುದ್ರಿಸಿದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಕ್ಷೇತ್ರದ ಸಂಸದೆಯಾದ ಸುಮಲತಾ ಅಂಬರೀಶ್ ಹೆಸರು ಸೇರಿಸುವುದನ್ನೇ ತಾಲೂಕು ಆಡಳಿತ ಮರೆತಿದೆ.

ಕೆ.ಆರ್ ಪೇಟೆ ತಾಲೂಕಿನಲ್ಲಿ ನಡೆಸಲು ತೀರ್ಮಾನ ಮಾಡಿರುವ ಕೆಂಪೇಗೌಡ ಜಯಂತಿ ಅಂಗವಾಗಿ ಆಹ್ವಾನ ಪತ್ರಿಕೆಯನ್ನು ಮುದ್ರಣ ಮಾಡಿಸಲಾಗಿತ್ತು. ಆದರೆ ವಿಚಿತ್ರ ಎಂದರೆ ತಮ್ಮ ಕ್ಷೇತ್ರದ ಸಂಸದೆಯ ಹೆಸರನ್ನೇ ಇದರಲ್ಲಿ ಕೈ ಬಿಡಲಾಗಿದೆ. ಇನ್ನು ಸುಮಲತ ಅವರ ಹೆಸರು ಬಿಟ್ಟು ಹೋಗಿರುವುದಕ್ಕೆ ಈಗಾಗಲೇ ಅನೇಕರು ಗರಂ ಆಗಿದ್ದಾರೆ. ಸುಮಲತಾ ಅವರ ಹೆಸರು ಮುದ್ರಣ ಮರೆತ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಹಾಗೂ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ತಾಲೂಕು ಆಡಳಿತ ಮಂಡಳಿ ವಿರುದ್ಧ ಗರಂ ಆಗಿದ್ದಾರೆ.

ಇದೆಲ್ಲಾ ರಾಜಕೀಯ ಪ್ರೇರಿತವಾಗಿದೆಯೆಂದು, ಅದರಿಂದಾಗಿಯೇ ಸುಮಲತ ಅಂಬರೀಶ್ ಅವರ ಹೆಸರನ್ನು ಕೈ ಬಿಡಲಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಕಾರಣ ಏನೇ ಆದರೂ ಒಂದು ಕಾರ್ಯಕ್ರಮದಲ್ಲಿ ತಮ್ಮ ಕ್ಷೇತ್ರದ ಸಂಸದೆಯ ಹೆಸರನ್ನೇ ಮರೆಯಲು ಹೇಗೆ ಸಾಧ್ಯ ಎಂಬುದು ಪ್ರಶ್ನೆ. ತಾಲ್ಲೂಕು ಆಡಳಿತ ಮಂಡಳಿಗೆ ಸಂಸದೆಯ ಹೆಸರನ್ನು ಮುದ್ರಣ ಮಾಡಿಸಬೇಕು ಎಂಬ ಕನಿಷ್ಠ ಸೌಜನ್ಯ ಕೂಡಾ ನೆನಪಿಲ್ಲವೇ? ಎಂಬ ಅಸಮಾಧಾನ ಮೂಡಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here