ಪುಲ್ವಾಮ ದುರಂತದಲ್ಲಿ‌ ದೇಶಕ್ಕಾಗಿ ಪ್ರಾಣ ಅರ್ಪಿಸಿದ ನಲವತ್ತಕ್ಕೂ ಹೆಚ್ಚಿನ ವೀರಯೋಧರಲ್ಲಿ ಮಂಡ್ಯ ಜಿಲ್ಲೆಯ ಕೆ ಎಮ್ ದೊಡ್ಡಿ ಸಮೀಪದ ಗುಡಿಗೆರೆಯ ವೀರ ಯೋಧ ಗುರು ಅವರೂ ಸೇರಿರುವುದು ಕರುನಾಡಿನ ಜನತೆಗೆ ಹೆಚ್ಚಿನ ದುಃಖವಾಗಿದೆ. ಗುರು ಅವರು ಸೇನೆಯ ಕನ್ನಡಿಗರ ಜೊತೆ ಮಂಡ್ಯ ಸೊಗಡಿನ ಶೈಲಿಯಲ್ಲೇ ಗಟ್ಟಿಯಾಗಿ ಮಾತನಾಡುತ್ತಿದ್ದರು ಎಂದು ಯೋಧ ಗುರುವಿನ ಸ್ನೇಹಿತ ಮೈಸೂರಿನ ಮತ್ತೊಬ್ಬ ಯೋಧ ಮಹದೇವ್ ಹಂಚಿಕೊಂಡಿದ್ದಾರೆ. ಗುರು ತಾನು ತೆಗೆದುಕೊಂಡ ಕಾರ್ಯವನ್ನು ಸಾಧಿಸಿಯೇ ತೀರುವ ಛಲ ಹೊಂದಿದ್ದ ಯೋಧ ಗುರು ಎಲ್ಲರಿಗೂ ಅಚ್ಚುಮೆಚ್ಚಿನ ಗೆಳೆಯನಾಗಿದ್ದ ಎಂದು ಆತನ ಜೊತೆ ಕಾರ್ಯನಿರ್ವಹಿಸಿದ್ದ ಸಿಆರ್‍ಪಿಎಫ್‍ನ ಕೆಲ ಯೋಧರು ನೆನೆಪಿಸಿಕೊಂಡಿದ್ದಾರೆ.

ಸಿಆರ್‍ಪಿಎಫ್‍ಗೆ ಆಯ್ಕೆಯಾದಾಗ ನಾವೆಲ್ಲ ಜೊತೆಗೆ ತರಬೇತಿಗೆ ಹೋಗುತ್ತಿದ್ದೆವು. ಎಲ್ಲದರಲ್ಲೂ ಆತ ಮೊದಲಿಗನಾಗಿದ್ದ. ಮಂಡ್ಯ ಭಾಷೆಯಲ್ಲೇ ಎಲ್ಲರನ್ನು ಆಕರ್ಷಿಸುತ್ತಿದ್ದ ಎಂದು ಮೈಸೂರು ಮೂಲದ ಯೋಧ ಮಹದೇವ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.ಕಾಶ್ಮೀರದಲ್ಲಿ ಸೇವೆ ಸಲ್ಲಿಸುವಾಗ ಯಾವುದಕ್ಕೂ ಅಂಜುತ್ತಿರಲಿಲ್ಲ. ಆತನ ದನಿಯಲ್ಲೇ ದೇಶಾಭಿಮಾನ ಯಾವಾಗಲೂ ಕೇಳಿ ಬರುತ್ತಿತ್ತು. ಇತರರಿಗೂ ಸ್ಫೂರ್ತಿ ನೀಡುವಂತೆ ಯಾವುದೇ ಕಾರ್ಯಾಚರಣೆ ಇರಲಿ, ಕೆಚ್ಚೆದೆಯಿಂದ ಮುನ್ನುಗ್ಗುತ್ತಿದ್ದ.

ನಾನು ಅದನ್ನು ನೋಡಿದ್ದೇನೆ.ಉಗ್ರರು ಉಪಟಳದ ಪ್ರದೇಶಗಳಲ್ಲಿ ಹೇಗೆ ನಾವು ಇರುತ್ತೇವೆ ಎಂಬುದು ನಮಗೇ ಮಾತ್ರ ಗೊತ್ತು ಎಂದು ಹೇಳಿದ್ದಾರೆ. ಕೆಲ ತಿಂಗಳ ಕಾಲ ಆತನೊಂದಿಗೆ ಕಳೆದಿದ್ದೇನೆ. ಏನಾದರೊಂದು ಸಾಧಿಸಬೇಕೆಂಬ ಹಂಬಲ ಅವರಲ್ಲಿತ್ತು.ಆದರೆ ಹೇಳಿದಂತೆಯೇ ತನ್ನ ಪ್ರಾಣವನ್ನು ದೇಶಕ್ಕಾಗಿ ಮುಡುಪಾಗಿಟ್ಟಿದ್ದಾನೆ ಎಂದು ಕಣ್ಣೀರಿಟ್ಟ ಯೋಧ ಮಹದೇವ್, ನಾನು ಕೂಡ ಈಗ ಕೂಡಲೇ ರಜೆ ಮೊಟಕುಗೊಳಿಸಿ ನನ್ನ ದೇಶ ಸೇವೆಗೆ ಸಜ್ಜಾಗುತ್ತೇನೆ. ಏನಾದರೊಂದು ಆಗಲೇಬೇಕು ಎಂದು ಉದ್ಗರಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here