ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಜೀವಂತ ಬಾಂಬ್ ಅನ್ನು ಕೆಂಜಾರು ಮೈದಾನಕ್ಕೆ ಶಿಫ್ಟ್​ ಮಾಡಲಾಗಿದ್ದು, ನಿಷ್ಕ್ರಿಯಗೊಳಿಸೋ ಪ್ರಕ್ರಿಯೆ ಆರಂಭವಾಗಿದೆ. ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಹಾಗೂ ಪೊಲೀಸರು ಇದ್ದು, ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗ್ತಿದೆ. ಬಾಂಬ್ ಇರಿಸಿರೋ ಕಂಟೇನರ್​ ಬಳಿ ತಜ್ಞರು ಮಾತ್ರ ಇದ್ದು, ಉಳಿದವರು ದೂರದಲ್ಲಿ ನಿಂತಿದ್ದಾರೆ. ರಿಮೋಟ್​ ಮೂಲಕ ಬಾಂಬ್ ಕಂಟೇನರ್​ನ ಬಾಗಿಲು ಓಪನ್ ಮಾಡಿ ಬ್ಯಾಗ್ ಹೊರಗೆ ತೆಗೆದು ಮರಳಿನ ಚೀಲಗಳ ನಡುವೆ ಇಡಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಗಂಗಯ್ಯ ಅನ್ನೋರು ನಿಷ್ಕ್ರಿಯ ಕಾರ್ಯವನ್ನ ಮಾಡ್ತಿದ್ದಾರೆ.ಸ್ಟೀಲ್ ಬಾಕ್ಸ್​​ನಲ್ಲಿತ್ತು ಬಾಂಬ್  ಆಟೋದಲ್ಲಿ ಬಂದಿದ್ದ ಶಂಕಿತ ವ್ಯಕ್ತಿ ಲ್ಯಾಪ್​ಟಾಪ್​ ಬ್ಯಾಗ್​ನಲ್ಲಿ ಬಾಂಬ್ ತಂದು ಏರ್​ಪೋರ್ಟ್​​ನ ವಿವಿಐಪಿ ಪಾರ್ಕಿಂಗ್ ಬಳಿಯ ಟಿಕೆಟ್​ ಕೌಂಟರ್​ ಸಮೀಪ ಇಟ್ಟುಹೋಗಿದ್ದ ಅನ್ನೋ ಮಾಹಿತಿ ಸಿಕ್ಕಿದೆ. ಈ ಸ್ಫೋಟಕ ಸುಮಾರು 10 ಕೆ.ಜಿ ತೂಕವಿದ್ದು, ಸ್ಟೀಲ್ ಬಾಕ್ಸ್​ನಲ್ಲಿ ಇರಿಸಲಾಗಿತ್ತು ಅಂತ ತಿಳಿದುಬಂದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here