ಟೀಂ ಇಂಡಿಯಾ ಓಪನರ್ ಮನೀಶ್ ಪಾಂಡೆ ಈಗ ಮದುವೆಯ ಸಂಭ್ರಮದಲ್ಲಿದ್ದಾರೆ. ದಕ್ಷಿಣ ಭಾರತದ ನಟಿ ಅಶ್ರಿತಾ ಶೆಟ್ಟಿ ಅವರೊಂದಿಗೆ ಕ್ರಿಕೆಟಿಗ ಮನೀಶ್ ಇದೇ ಡಿಸೆಂಬರ್ 2 ರಂದು ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ.2012ರಲ್ಲಿ ಬಿಡುಗಡೆಯಾದ ‘ತೆಲಿಕೇಡಾ ಬೋಲಿ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ 26 ವರ್ಷದ ನಟಿ ಅಶ್ರಿತಾ ಅವರು ಇಂದ್ರಜಿತ್, ಒರು ಕನ್ನಿಯಂ ಮೂನು ಕಲವಾನಿಕಲಂ, ಉದಯಂ ಎನ್‌ಎಚ್ 4 ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಮಂಗಳೂರು ಮೂಲದ ಆಶ್ರಿತಾ ಶೆಟ್ಟಿ ಅವರನ್ನು 4 ವರ್ಷಗಳ ಹಿಂದೆ ಪಾರ್ಟಿಯೊಂದರಲ್ಲಿ ಮನೀಶ್ ಪಾಂಡೆ ಭೇಟಿಯಾಗಿದ್ದರು. ಪರಿಚಯ ಸ್ನೇಹದಿಂದ ಪ್ರೇಮಕ್ಕೆ ತಿರುಗಿ ಇದೀಗ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. 26 ವರ್ಷದ ಆಶ್ರಿತಾ ಶೆಟ್ಟಿ 2012ರಲ್ಲಿ ತೆಲಿಕೆದ ಬೊಳ್ಳಿ ಎಂಬ ತುಳು ಚಿತ್ರದಲ್ಲಿ ನಟಿಸಿದ್ದಾರೆ. ನಂತರ ಉದಯಮ್ ಎನ್ಎಚ್4, ಒರು ಕನ್ನಿಯುಮ್ ಮೂನು ಕಲವಾನಿಕಾಲುಮ್, ಇಂದ್ರಜಿತ್ ಮತ್ತು ನಾನ್ ತಾನ್ ಸಿವಾ ಎಂಬ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. 30 ವರ್ಷದ ಮನೀಶ್ ಪಾಂಡೆ ಸದ್ಯ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿದ್ದಾರೆ. ಭಾರತ ಪರ 23 ಏಕದಿನ ಹಾಗೂ 31 ಟಿ20 ಪಂದ್ಯಗಳನ್ನಾಡಿರುವ ಮನೀಶ್ ಪಾಂಡೆ, ಐಪಿಎಲ್’ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಮನೀಶ್ ಪಾಂಡೆ ಅವರ ವಿವಾಹ ಕಾರ್ಯಕ್ರಮದಲ್ಲಿ ಆಪ್ತರು ಮತ್ತು ಸಂಬಂಧಿಕರು ಭಾಗವಹಿಸಲಿದ್ದು, ಸಂಪ್ರದಾಯದ ಪ್ರಕಾರ ಎರಡು ದಿನಗಳ ಕಾಲ ವಿವಾಹ ಕಾರ್ಯಕ್ರಮ ನಡೆಯಲಿದೆ. ಕನ್ನಡದ ಕ್ರಿಕೆಟಿಗನಾದ ಮನೀಶ್, ಪ್ರಸ್ತುತ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ನಾಯಕತ್ವ ವಹಿಸುತ್ತಿದ್ದಾರೆ. ಡಿಸೆಂಬರ್​ನಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು ಟಿ-20 ಸರಣಿ ಆಡಲಿದೆ. ಈ ನಡುವೆ ಪಾಂಡೆ ವಿವಾಹ ನಡೆಯಲಿದೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here