ಮಂಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದಿದ್ದು 4 ಮನೆಗಳು ನೆಲಸಮವಾಗಿವೆ. ಮಂಗಳೂರಿನ ಗುರುಪುರದಲ್ಲಿ ಘಟನೆ ನಡೆದಿದ್ದು ಕುಸಿದ ಗುಡ್ಡದಡಿ ಇಬ್ಬರು ಮಕ್ಕಳು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.ಇನ್ನು ಸ್ಥಳೀಯರು ಮಣ್ಣು ತೆರವು ಮಾಡುತ್ತಿದ್ದಾರೆ. ಮೂವತ್ತು ಅಡಿ  ಆಳವಾಗಿ ಗುಡ್ಡ ಕುಸಿದಿದ್ದು ಮನೆಯ ಅಡಿಯಲ್ಲಿ  ಯಾರು ಸಿಲುಕಿದ್ದಾರೆ ಎಂಬುದು ಇನ್ನೂ ಸಂಪರ್ಕಕ್ಕೆ ಬರುತ್ತಿಲ್ಲ.

ಗುಡ್ಡ ಇನ್ನೂ ಹೆಚ್ಚು ಕುಸಿಯಬಹುದಾಗಿದ್ದು ಹಲವು ಮನೆಗಳು ಅಪಾಯದಲ್ಲಿವೆ ಎನ್ನಲಾಗಿದೆ. ಮಂಗಳೂರು ಹೊರವಲಯದ ಗುರುಪುರದ ಬಂಗ್ಲೆಗುಡ್ಡೆಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಎನ್​ಡಿಆರ್​ಎಫ್​ ಆಗಮಿಸಿದ್ದು ರಕ್ಷಣಾ ಕಾರ್ಯಾಚರಣೆ ಚಾಲ್ತಿಯಲ್ಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here