ಕೊರೊನಾ ಎಲ್ಲೆಡೆ ರುದ್ರ ನರ್ತನವನ್ನು ಮಾಡುತ್ತಾ ಸಾಗಿದೆ. ಮನಕಲಕುವ ಅದೆಷ್ಟೋ ನೋವಿಗೆ ಕಾರಣವಾಗಿದೆ ಈ ಭಯಾನಕ ರೋಗ. ಜಗತ್ತನ್ನೇ ತಲ್ಲಣಗೊಳಿಸಿರುವ ಈ ರೋಗಕ್ಕೆ ಹಿರಿಯರು, ಕಿರಿಯರು ಹಾಗೂ ಹಸುಗೂಸುಗಳು ಎಂಬ ಬೇಧವಿಲ್ಲ. ಇಂತಹುದೇ ಒಂದು ಘಟನೆಯಲ್ಲಿ ಮಂಗಳೂರಿನ 10 ತಿಂಗಳ ಹಸುಗೂಸಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ತನ್ನ ಕಂದನಿಗೆ ಸೋಂಕು ತಗುಲಿದ್ದರೂ ಕೂಡಾ ತನ್ನ ಮಗುವಿಗೆ ತನ್ನ ಎದೆಹಾಲು ಉಣಿಸುವುದನ್ನು ಮಾತ್ರ ತಾಯಿಯೊಬ್ಬರು ನಿಲ್ಲಿಸಿಲ್ಲ ಎನ್ನಲಾಗಿದೆ. ಸೋಂಕಿನ ಭೀತಿಯ ನಡುವೆಯೂ ತಾಯಿ ಮಗುವಿನ ಆರೈಕೆಗೆ ನಿಂತಿದ್ದಾರೆ

ಕೇರಳಕ್ಕೆ ಹೋಗಿ ಬಂದ ನಂತರ ಮಗುವಿಗೆ ಕೊರೊನಾ ಸೋಕಿದೆ. ಮಗುವನ್ನು ಐಸೋಲೇಶನ್ ವಾರ್ಡ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಎಳೆ ಮಗುವಿಗೆ ತಾಯಿಯ ಆರೈಕೆ, ಆಕೆಯ ಬೆಚ್ಚಗಿನ ಅಪ್ಪುಗೆ ಅತ್ಯಗತ್ಯವಾಗಿದೆ. ಅಲ್ಲದೆ ತಾಯಿಯ ಎದೆ ಹಾಲು ಮಗುವಿನ ಆರೋಗ್ಯಕ್ಕೆ ಉತ್ತಮವಾದುದರಿಂದ ಆಸ್ಪತ್ರೆಯಲ್ಲಿ ಮಗುವಿನ ತಾಯಿ ಹಾಗೂ ಅವರೊಂದಿಗೆ ಅಜ್ಜಿಯೊಬ್ಬರಿಗೆ ಮಗುವಿನ ಬಳಿ ಇರಲು ಅವಕಾಶ ನೀಡಲಾಗಿದೆ. ಅಲ್ಲದೆ ಮಗುವಿ ತಾಯಿ ಮತ್ತು ಅಜ್ಜಿಯ ಆರೋಗ್ಯದ ಮೇಲೆ ಕೂಡಾ ತೀವ್ರ ನಿಗಾ ಇರಿಸಲಾಗಿದೆ.

ಐಸೋಲೇಶನ್ ವಾರ್ಡ್ ನೊಳಗೆ ಹೋಗುವಾಗಲೇ ತಾಯಿ ಮತ್ತು ಅಜ್ಜಿ ಇಬ್ಬರೂ ವೈದ್ಯಕೀಯ ರಕ್ಷಣಾ ಸಾಮಗ್ರಿಗಳು ಹಾಗೂ ಪಿಪಿಎ ಕಿಟ್ ಜೊತೆಗೆ ಹೋಗಬೇಕಿದೆ. ತಾಯಿ ಮಗುವಿನ ವೈದ್ಯೆಯಂತೆ ಕೂಡಾ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಯ ವೈದ್ಯರು ಕಾಲಕಾಲಕ್ಕೆ ತಾಯಿ ಹಾಗೂ ಅಜ್ಜಿಯ ಗಂಟಲು ದ್ರವ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಮಗುವಿನ ತಾಯಿಗೆ ಸೋಂಕು ತಗುಲಿಲ್ಲ. ಆದರೆ ಹಸುಗೂಸಿಗಾಗಿ ತಾಯಿ ರೋಗದ ಭಯವನ್ನು ಬಿಟ್ಟು ಮಗುವಿನ ಆರೈಕೆಗೆ ನಿಂತಿರುವುದು ಆಕೆಯ ತ್ಯಾಗ ಹಾಗೂ ಮಮತೆಯ ಸಂಕೇತವಾಗಿದೆ.

ಚಿತ್ರಗಳು :- ಸಾಂದರ್ಭಿಕ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here