ಇಂದು ಮತ್ತೊಮ್ಮೆ ಕರ್ನಾಟಕ ಬೆಚ್ಚಿ ಬಿದ್ದಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಅನುಮಾನಾಸ್ಪದ ಬ್ಯಾಗ್‌ನಲ್ಲಿ ಸಜೀವ ಬಾಂ’ಬ್ ಸಿಕ್ಕಿತ್ತು. ವಿಮಾನ ನಿಲ್ದಾಣದ ಆವರಣದಲ್ಲಿ ಬ್ಯಾಗ್ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. ಸೋಮವಾರ ಬೆಳಗ್ಗೆ 10 ಗಂಟೆಗೆ ಏರ್‌ಪೋರ್ಟ್‌ ಆವರಣದಲ್ಲಿ ಒಂದು ಬ್ಯಾಗ್ ಪತ್ತೆಯಾಗಿತ್ತು. ಆಟೋ ರಿಕ್ಷಾದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಬ್ಯಾಗ್‌ ಎಸೆದು ಹೋಗಿರುವ ಸಂಶಯ ವ್ಯಕ್ತವಾಗಿದೆ. ಇದೀಗ ಉಗ್ರರ ಭಾರೀ ಸಂಚನ್ನು ಪೋಲೀಸರು ವಿಫಲಗೊಳಿಸಿದ್ದಾರೆ.ಬಾಂ’ಬ್ ನಿಷ್ಕ್ರಿಯ ಪಡೆಯ ಅಧಿಕಾರಿಗಳು ಯಶಸ್ವಿಯಾಗಿ ಕೆಂಜಾರು ಮೈದಾನದಲ್ಲಿ ಬಾಂಬ್ ಸ್ಫೋಟಗೊಳಿಸಿದ್ದಾರೆ.

ನಿರ್ಜನ ಪ್ರದೇಶಕ್ಕೆ ಆ ಬಾಂ’ಬ್ ಅನ್ನು ತಂದು ಸ್ಪೋ’ಟಿಸಿದ್ದಾರೆ‌ ಈ ನಡುವೆ ಮತ್ತೊಂದು ಆತಂಕಕಾರಿ ವಿಚಾರ ಬಯಲಾಗಿದ್ದು, ಇದು ಕರ್ನಾಟದಲ್ಲಿ ಇದುವರೆಗೂ ಸಿಕ್ಕಿರುವ ಅತ್ಯಂತ ಸುಧಾರಿತ ಸ್ಫೋ’ಟಕ ಎನ್ನಲಾಗಿದೆ. ಮಂಗಳೂರಲ್ಲಿ ಪತ್ತೆಯಾಗಿದ್ದು, ಇದು ಅತ್ಯಂತ ಅಪಾಯಕಾರಿ ಎನ್ನಲಾಗಿದೆ. ಇದು ಐ.ಇ.ಡಿ ಅಂದರೆ ಅತ್ಯಂತ ಸುಧಾರಿತ ಸ್ಫೋ’ಟಕ ಸಾಧನವಾಗಿದೆ. ಬ್ಯಾಗ್ ನಲ್ಲಿ 10 ಕೆಜಿ ಐ.ಇ.ಡಿ ಸ್ಫೋಟಕ ತುಂಬಿಡಲಾಗಿದ್ದು, ಒಂದು ವೇಳೆ ಇದು ಸ್ಫೋ’ಟಿಸಿದ್ದರೆ 500 ಮೀಟರ್ ವ್ಯಾಪ್ತಿಯಲ್ಲಿ ಹಾನಿಯಾಗುವ ಸಾಧ್ಯತೆ ಇತ್ತು. ಆದರೆ ಸಮಯಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದೆ.ಇನ್ನು ಮಂಗಳೂರಿನತ್ತ ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ) ತಂಡ ದೌಡಾಯಿಸಿದ್ದು, ಮಂಗಳೂರು ಪೊ’ಲೀಸರನ್ನು ಸಂಪರ್ಕಿಸಿದ್ದಾರೆ. ಅತ್ತ ಪೊಲೀಸರು ಕೂಡಾ ವಿಮಾನ ನಿಲ್ದಾಣದ ಸುತ್ತಮುತ್ತ ಭಾರೀ ಕಟ್ಟೆಚ್ಚರ ವಹಿಸಲಾಗಿದ್ದು, ಬಾಂಬ್ ಇಟ್ಟ ಶಂಕಿತರನ್ನು ಪತ್ತೆ ಹಚ್ಚುವ ಕಾರ್ಯವೂ ಆರಂಭಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಜೀವಂತ ಬಾಂಬ್ ಅನ್ನು ಸ್ಫೋಟಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ವಹಿಸಿದ್ದು ಸಿ.ಐ.ಎಸ್.ಎಫ್ ತಂಡದ ಯೋಧರು. ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಯೋಧರು ಸ್ಫೋ’ಟಕದತ್ತ ತೆರಳಿ ಸುದೀರ್ಘವಾಗಿ ವಿವಿಧ ಆಪರೇಷನ್ ನಡೆಸುವ ಮೂಲಕ ಸ್ಫೋ’ಟಗೊಳಿಸಿದ್ದಾರೆ. ಅಧಿಕಾರಿಗಳು ಎಲ್ಲರನ್ನೂ ದೂರ ಕಳಿಸಿ ಬಾಂ’ಬ್ ಸ್ಫೋಟಿಸಿದ ದೃಶ್ಯ ಮೈನವಿರೇಳಿಸುವಂತಿತ್ತು. ಎಲ್ಲರೂ ಯೋಧರ ಧೈರ್ಯ ಹಾಗೂ ಸಾಹಸಕ್ಕೆ ಸಲ್ಯೂಟ್ ಎಂದಿದ್ದಾರೆ. ಜೊತೆಗೆ ಸುತ್ತಮುತ್ತಲಿದ್ದ ಜನರು ಬಾಂಬ್ ನಾಶವಾದ ಬಳಿಕ ಭಾರತ್ ಮಾತಾ ಕಿ ಜೈ ಎನ್ನುವ ಜಯಘೋಷದೊಂದಿಗೆ ಪೋಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here