ಲಾಕ್​ಡೌನ್​ ಜಾರಿಯಾದ ಮೇಲೆ ಕೊರೊನಾ ಸೋಂಕು ಹರಡುವ ಭೀತಿಯಲ್ಲಿ ರಾಜ್ಯದಲ್ಲಿನ ಎಲ್ಲಾ ಧಾರ್ಮಿಕ ಕ್ಷೇತ್ರಗಳನ್ನು ಕೂಡಾ ಭಕ್ತರ ಪ್ರವೇಶಕ್ಕೆ ನಿರ್ಬಂಧವನ್ನು ಹೇರಲಾಗಿತ್ತು. ಎಲ್ಲಾ ಪ್ರಮುಖ ಆಲಯಗಳು ಕೂಡಾ ಬಂದ್ ಆಗಿದ್ದವು. ಆದರೆ ಲಾಕ್ ಡೌನ್ ನಿರ್ಬಂಧಗಳ ಸಡಿಲಿಕೆ ನಂತರ ಒಂದೊಂದಾಗಿ ಧಾರ್ಮಿಕ ಕ್ಷೇತ್ರದಗಳನ್ನು ಭಕ್ತರ ಪ್ರವೇಶಕ್ಕೆ ತೆರೆಯಲಾಗಿದೆ. ಜೂನ್ 8 ರಿಂದಲೇ ದೇಶದ ಹಲವು ಧಾರ್ಮಿಕ ಕ್ಷೇತ್ರಗಳು ಮತ್ತೆ ತಮ್ಮ ಚಟುವಟಿಕೆಗಳನ್ನು ಆರಂಭ ಮಾಡಿದ್ದವು,ಅಲ್ಲದೇ ಸೂಕ್ತ ಕ್ರಮಗಳನ್ನು ಕೂಡಾ ಅಳವಡಿಸಲಾಯಿತು. ಈಗ ಇದೇ ಹಿನ್ನೆಲೆಯಲ್ಲಿ ಜುಲೈ 2 ರಿಂದ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಕೂಡಾ ಅವಕಾಶವು ಜುಲೈ ನಿಂದ ಸಿಗಲಿದೆ.

ಮಂತ್ರಾಲಯದ ಶ್ರೀ ಗುರು ರಾಘವೇಂದ್ರರ ದರ್ಶನಕ್ಕೆ ದರ್ಶನಕ್ಕೆ ಆಧಾರ್​ ಕಾರ್ಡ್​, ಮೊಬೈಲ್​ ನಂಬರ್​ ಅನ್ನು ಕಡ್ಡಾಯ ಮಾಡಲಾಗಿದೆ. ಅಲ್ಲದೇ ಅರವತ್ತೈದು ವರ್ಷ ಮೇಲ್ಪಟ್ಟ ಹಿರಿಯರಿಗೆ ಮತ್ತು ಹತ್ತು ವರ್ಷ ಒಳಗಿನ ಮಕ್ಕಳಿಗೆ ಶ್ರೀ ಕ್ಷೇತ್ರದಲ್ಲಿ ರಾಯರ ದರ್ಶನಕ್ಕೆ ಅವಕಾಶ ಇಲ್ಲವೆಂದು ಸೂಚನೆ ನೀಡಲಾಗಿದೆ. ಅದು ಮಾತ್ರವೇ ಅಲ್ಲದೇ ಕಂಟೈನ್​ಮೆಂಟ್​​ ವಲಯದಿಂದ ಬರುವವರಿಗೆ ಕೂಡಾ ದೇವಸ್ಥಾನದೊಳಗೆ ಪ್ರವೇಶ ನೀಡಲಾಗುವುದಿಲ್ಲವೆಂದು ದೇವಸ್ಥಾನದ ಆಡಳಿತ ಮಂಡಳಿ ಸೂಚನೆಗಳನ್ನು ನೀಡಿದೆ. ದೇವಾಲಯದಲ್ಲಿ
ಸರ್ಕಾರದ ನಿಯಮಗಳ ಪ್ರಕಾರ ಬೆಳಗ್ಗೆ ಎಂಟರಿಂದ ಸಂಜೆ ಆರು ಗಂಟೆಯವರೆಗೆ ಮಾತ್ರ ರಾಯರ ದರ್ಶನ ಇರುತ್ತದೆ.

ದೇಶದಲ್ಲಿ ಈಗಾಗಲೇ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಭಕ್ತರು ಭೇಟಿ ನೀಡಲು ಆರಂಭ ಮಾಡಿದ್ದಾರೆ. ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲಿ ಕೂಡಾ ಮುನ್ನೆಚ್ಚರಿಕೆಯ ಕ್ರಮಗಳು ಹಾಗೂ ಭಕ್ತರು ಅನುಸರಿಸಬೇಕಾದ ನಿಯಮಗಳ ಬಗ್ಗೆ ಗಮನವನ್ನು ಹರಿಸಲಾಗಿದೆ‌. ಪ್ರಸ್ತುತ ಧಾರ್ಮಿಕ ಕ್ಷೇತ್ರಗಳಲ್ಲಿ ಇನ್ನು ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂಬುದೊಂದು ಸಮಾಧಾನಕರ ವಿಷಯವಾಗಿದ್ದು, ವಿಶೇಷ ದಿನಗಳಲ್ಲಿ ಭಕ್ತರ ಆಗಮನವನ್ನು ನಿಷೇಧಿಸಿ ಜನ ದಟ್ಟಣೆಯನ್ನು ತಡೆಯುವ ಕ್ರಮಗಳನ್ನು ಕೂಡಾ ಅನುಸರಿಸಲಾಗುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here