ಏಕಪ್ಪಾ ನನಗೆ ಈ ದುರ್ಬುದ್ಧಿ?

‘ಮಂತ್ರಾಲಯ ಮಹಾತ್ಮೆ’ ಚಿತ್ರದ ಸೆಟ್. ಗುರು ರಾಘವೇಂದ್ರನಿಂದ ಪ್ರೇರಿತರಾಗಿ ಅತೀವ ತನ್ಮಯತೆಯಿಂದ ಆ ಪಾತ್ರದಲ್ಲಿ ತೊಡಗಿಸಿಕೊಂಡಿದ್ದರು ರಾಜ್. ಚಿತ್ರೀಕರಣದುದ್ದಕ್ಕೂ ಸನ್ಯಾಸಿಯ ಬದುಕನ್ನೇ ತನ್ನದಾಗಿಸಿಕೊಂಡಿದ್ದರು. ಒಮ್ಮೆ ಚಿತ್ರೀಕರಣದ ಸೆಟ್‌ನಲ್ಲಿ ಅಚಾತುರ್ಯ ನಡೆದುಹೋಯಿತು. ಓರ್ವ ಕೆಲಸಗಾರನ ಕರ್ತವ್ಯ ಚ್ಯುತಿ ಬಗ್ಗೆ ರಾಜ್ ತುಸು ಕೋಪಗೊಂಡುಬಿಟ್ಟರು. ತಕ್ಷಣವೇ ತಮ್ಮ ಪ್ರಮಾದದ ಬಗ್ಗೆ ಅರಿವಾಗಿ ತೆರೆಮರೆಗೆ ಸರಿದು ಜೋರಾಗಿ ಅಳಲು ಶುರು ಮಾಡಿದರು.

ನಿರ್ದೇಶಕರು, ಹಿರಿಯ ಕಲಾವಿದರು, ಹಿತೈಷಿಗಳು ಸಮಾಧಾನ ಹೇಳಿದರೂ ಅವರ ಕಣ್ಣೀರು ನಿಲ್ಲಲಿಲ್ಲ. ‘ಗುರಾರಾಯ ಏಕಪ್ಪಾ ನನಗೀ ಕೋಪಿಸಿಕೊಳ್ಳುವ ದುರ್ಬುದ್ಧಿ ಕೊಟ್ಟೆ? ಅದೂ ನಿನ್ನ ವೇಷದಲ್ಲಿದ್ದಾಗ ಈ ರೀತಿ ಆಗಬಹುದೆ?’ ಎಂದು ತಮ್ಮನ್ನು ತಾವೇ ಶಿಕ್ಷಿಸಿಕೊಂಡರು ರಾಜ್. ತೆರೆಯ ಮೇಲಿನ ಆದರ್ಶಗಳಾಗಿ ವ್ಯಕ್ತಿತ್ವವನ್ನು ಹದಗೊಳಿಸಿಕೊಳ್ಳುವ ರಾಜ್ ಮಾದರಿಯನ್ನು ಇಲ್ಲಿ ಶ್ರದ್ಧೆಯಿಂದ ಗಮನಿಸಬೇಕು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here