ರಾಯರು ನೆಲೆಸಿರುವ ಪರಮ ಪಾವನ ಕ್ಷೇತ್ರ ಎಂದರೆ ಅದು ಮಂತ್ರಾಲಯ. ಶ್ರೀ ಗುರು ರಾಘವೇಂದ್ರರ ದಿವ್ಯ ಸಾನಿಧ್ಯವದು. ಕಷ್ಟ ಎಂದು ರಾಯರನ್ನು ನೆನೆದು ಅವರ ದರ್ಶನ ಪಡೆವ ಅದೆಷ್ಟೋ‌‌ ಜನರ ಸಂಕಷ್ಟಗಳನ್ನು ಪರಿಹರಿಸುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆ ಅಪಾರ. ಅವರು ನಂಬಿದ ಭಕ್ತರ ಕೈ ಹಿಡಿದು ಅಂಧಕಾರದಿಂದ, ಜ್ಞಾನದ ಬೆಳಕಿನಡೆಗೆ ನಡೆಸುವರು ಎಂದು ನಂಬಿರುವ ಭಕ್ತರು ಕೋಟಿಗಳ ಸಂಖ್ಯೆಯಲ್ಲಿದ್ದಾರೆ. ಈ ಕ್ಷೇತ್ರವನ್ನು ನೋಡುವುದೇ ಒಂದು ಮಹಾ ಭಾಗ್ಯ. ರಾಯರು ದರ್ಶನಕ್ಕಾಗಿ ದಿನಂಪ್ರತಿ ಸಾವಿರಾರು ಜನ ಭಕ್ತರು ಮಂತ್ರಾಲಯಕ್ಕೇ ಭೇಟಿ ನೀಡುತ್ತಾರೆ.

ಇಂತಹ ಪುಣ್ಯ ಕ್ಷೇತ್ರದಲ್ಲಿ ನಡೆಯಿತೆನ್ನಲಾದ ಒಂದು ಆಶ್ಚರ್ಯಕರ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಇದು ಶ್ರೀ ಗುರು ರಾಯರ ಸನ್ನಿಧಿಯಲ್ಲಿ ನಡೆದ ಒಂದು ಪವಾಡವೇ ಎಂದು ಹೇಳುತ್ತಿದ್ದಾರೆ. ಅಲ್ಲದೆ ಈ ವಿಡಿಯೋ‌ ಬಹಳ ಬೇಗ ಎಲ್ಲೆಡೆ ಹರಡಿ ಸುದ್ದಿಯಾಗಿದೆ. ಮಂತ್ರಾಲಯ ಪುಣ್ಯ ಕ್ಷೇತ್ರದಲ್ಲಿ ರಾಯರ ಸನ್ನಿಧಾ‌ನದಲ್ಲಿ ಭೂತ ಚೇಷ್ಟೆಗಳು, ಪ್ರೇತ ಕಾಟಗಳು ಇಂತಹುವೆಲ್ಲಾ ನಡೆಯುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಅಂತಹ ತೊಂದರೆಗೊಳಗಾದವರು ಮಂತ್ರಾಲಯ ಪುಣ್ಯ ಕ್ಷೇತ್ರಕ್ಕೆ ಬಂದರೆ ಅವರ ದೇಹದಿಂದ ಆ ಶಕ್ತಿಗಳು ಓಡಿ ಹೋಗಲೇ ಬೇಕು.

ಅಂತಹುದೇ ಸನ್ನಿವೇಶ ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು, ಸನ್ನಿಧಾನದಲ್ಲಿ ಮೈಮೇಲೆ ಯಾವುದೋ‌ ಗಾಳಿ ಸೋಕಿದ ಮಹಿಳೆಯೊಬ್ಬರಿಗೆ ಶ್ರೀಗಳು ಮಂತ್ರ ಜಲವನ್ನು ಪ್ರೋಕ್ಷಣೆ ಮಾಡಿ ,ಆಕೆ ಕೆಲ ಹೊತ್ತು ವಿಚಿತ್ರವಾಗಿ ವರ್ತಿಸಿ, ಕಡೆಗೆ ಆ ಬಾಧೆಯಿಂದ ಮುಕ್ತಿ ಹೊಂದಿ ಸಾಮಾನ್ಯ ಸ್ಥಿತಿಗೆ ಬಂದಿದ್ದನ್ನು ನೋಡಬಹುದು. ಅದು ಆಕೆಯ ಮಾನಸಿಕ ತೊಂದರೆಯೋ, ಅಥವಾ ಪೀಡೆ ಪಿಶಾಚಿಗಳ‌‌ ಕಾಟವೋ ಒಟ್ಟಾರೆ ಆಕೆ ರಾಯರ ಸನ್ನಿಧಾನದಲ್ಲಿ ಮರಳಿ ಸಹಜ ಸ್ಥಿತಿಗೆ ಬಂದಿರುವ ಆ ದೃಶ್ಯಗಳು ವಿಡಿಯೋ ಮೂಲಕ ವೈರಲ್ ಆಗಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here