ಕೊರೊನಾ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಇಡೀ ದೇಶ 21 ದಿನಗಳ ಮಟ್ಟಿಗೆ ಲಾಕ್ ಡೌನ್ ಆಗಿದ್ದಾಗಿದೆ.‌ಲಾಕ್ ಡೌನ್ ಪರಿಣಾಮದಿಂದ ಉದ್ಯಮಗಳು ಸ್ತಬ್ಧ, ಉದ್ಯೋಗಸ್ತರು ಮನೆಯಲ್ಲಿ ಉಳಿದಿದ್ದಾರೆ. ಇನ್ನು ಎಲ್ಲೆಡೆ ಬಡವರು, ನಿರ್ಗತಿಕರು ಹಾಗೂ ದಿನಗೂಲಿ ಕಾರ್ಮಿಕರ ಬಗ್ಗೆ ಅವರ ಜೀವನ ದುರ್ಬರವಾಗಿದೆ ಎಂದು ಮಾತನಾಡುವಾಗಲೇ, ಮುಂಬೈನಲ್ಲಿ ವೇಶ್ಯಾವಾಟಿಕೆ ನಡೆಯುವ ಕಾಮಾಟಿಪುರದ ಮೇಲೆ ಕೂಡಾ ಈ ಲಾಕ್ ಡೌನ್ ತನ್ನ ಪರಿಣಾಮ ಬೀರಿದ್ದು, ವೇಶ್ಯಾವಾಟಿಕೆಯನ್ನೇ ವೃತ್ತಿಯಾಗಿ ನಂಬಿರುವವರು ಕೂಡಾ ಜೀವನ ನಡೆಸುವುದು ಕಠಿಣವಾಗಿದೆ ಎಂದಿದ್ದಾರೆ.

ಅಲ್ಲಿನ ಲೈಂಗಿಕ ಚಟುವಟಿಕೆ ಯನ್ನೇ ವೃತ್ತಿಯನ್ನಾಗಿ ನಡೆಸುವ ಮಹಿಳೆಯರು ಮುಂಬೈ ನಗರದಲ್ಲಿ ಈ ಮುನ್ನ ದೊಡ್ಡ ದೊಡ್ಡ ಸಮಸ್ಯೆಗಳು ಎದುರಾದಾಗ ಕೂಡಾ ತಮ್ಮ ದಂಧೆಯ ಮೇಲೆ ಕೆಟ್ಟ ಪರಿಣಾಮ ಬೀರಿರಲಿಲ್ಲ. ಆದರೆ ಇದೀಗ ಕೊರೊನಾ ಲಾಕ್ ಡೌನ್ ನಿಂದಾಗಿ ಸಂಜೆಗತ್ತಲಾಗುತ್ತಲೇ ಅತ್ತ ಹೋಗುತ್ತಿದ್ದ ಗ್ರಾಹಕರು ಯಾರೂ ಬರದೇ ವೇಶ್ಯಾವಾಟಿಕೆ ನಂಬಿರುವವರ ಜೀವನ ನಡೆಸುವುದು ಕೂಡಾ ಕಷ್ಟವಾಗಿದೆ ಎಂದಿದ್ದಾರೆ. ದಿನವೊಂದಕ್ಕೆ ಎರಡರಿಂದ ಮೂರು ಸಾವಿರ ಗಳಿಸುತ್ತಿದ್ದವರಿಗೆ ಈಗ ಸಂಪಾದನೆ ಇಲ್ಲದಂತಾಗಿದೆ ಎಂದಿದ್ದಾರೆ.

ಇಲ್ಲಿನ ಮಹಿಳೆಯರು ತಮ್ಮ ಮನೆಗಳಲ್ಲಿ ಅಲ್ಪ ಸ್ವಲ್ಪ ದವಸ ಧಾನ್ಯಗಳಿದ್ದು ಅದೂ ಇನ್ನೊಂದು ಎರಡು ಮೂರು ದಿನಗಳಲ್ಲಿ ಮುಗಿದು ಹೋಗುತ್ತದೆ. ಅದಾದ ನಂತರ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎನ್ನುವ ಮಹಿಳೆಯರು ಮೋದಿಯವರ ನೆರವನ್ನು ಕೋರಿ ಮನವಿಯನ್ನು ಮಾಡಿದ್ದಾರೆ. ಅವರು ತಮಗೂ ತಂದೆ ತಾಯಿಯರನ್ನು, ಕುಟುಂಬವನ್ನು ನಡೆಸುವ ಜವಾಬ್ದಾರಿ ಇದೆ, ಮೋದಿಯವರು ಆರ್ಥಿಕವಾಗಿ ಏನಾದರೂ ಸಹಾಯ ಮಾಡಿದ್ದರೆ ಖುಷಿಯಾಗುತ್ತಿತ್ತು ಎನ್ನುತ್ತಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here