ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಾದ ಶಿವರಾಜಕುಮಾರ್ ಅವರು ಮಳವಳ್ಳಿ ಬಳಿಯ ಶಿಂಷಾ  ಮಾರಮ್ಮ ದೇಗುಲದಲ್ಲಿ ಪ್ರತಿ ವರ್ಷ ಕುಟುಂಬದ ಜೊತೆ ಹಾಗು ಅಭಿಮಾನಿಗಳ ಜೊತೆ ಬಂದು ಪೂಜೆ ಸಲ್ಲಿಸಿ ಊಟ ಹಾಕಿಸುವುದು ಇತ್ತೀಚಿನ ವರ್ಷಗಳಲ್ಲಿ ವಾಡಿಕೆಯಾಗಿದೆ. ಶಕ್ತಿದೇವತೆ ಶಿಂಷಾ ಮಾರಮ್ಮ ದೇವಿಗೆ ಶಿವಣ್ಣ ಪ್ರತಿ ವರ್ಷ ಬಂದು ಕಾಣಿಕೆ ಅರ್ಪಿಸುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಇಂದು ಶಿವರಾಜಕುಮಾರ್ ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಾವೇರಿ ನದಿಯ ತಟದಲ್ಲಿ ಇರುವ ಶಿಂಷಾ ಮಾರಮ್ಮ ದೇಗುಲಕ್ಕೆ ಆಗಮಿಸಿ ವಿಶೇಷವಾಗಿ ಪೂಜೆ ಸಲ್ಲಿಸಿದ್ದಾರೆ‌. ಈ ವೇಳೆ ಶಿವಣ್ಣ ಅವರ ಕುಟುಂಬ ಮತ್ತು ಆಪ್ತರು ಹಾಗೂ

ಅಭಿಮಾನಿಗಳು ಶಿವರಾಜಕುಮಾರ್ ಜೊತೆ ಇದ್ದರು.ಇಂದು ಬೆಳಿಗ್ಗೆ ಮಳವಳ್ಳಿ ಬಳಿಯ ಶಿಂಷಾ ಮಾರಮ್ಮ ದೇಗುಲಕ್ಕೆ ಇಂದು ಶಿವರಾಜಕುಮಾರ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇದೇ ವೇಳೆ ಪ್ರತಿವರ್ಷ ದಂತೆ ಕಾವೇರಿ ನದಿಗೆ ಬಾಗೀನ ಅರ್ಪಿಸಿ ನಾಡಿನ ರೈತರಿಗೆ ಮಳೆಬೆಳೆ ಚೆನ್ನಾಗಿ ನಡೆಯಲೆಂದು ಪ್ರಾರ್ಥನೆ ಸಲ್ಲಿಸಿದರು.ಪ್ರತಿವರ್ಷ ಕುಟುಂಬದ ಜೊತೆ ಶಿಂಷಾ ಮಾರಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ ಅಲ್ಲಿನ ಸ್ಥಳೀಯರಿಗೆ ಊಟ ಹಾಕಿಸುತ್ತಿದ್ದ ಶಿವಣ್ಣ ಕಳೆದ ಎರಡು ವರ್ಷದಿಂದ ಚುನಾವಣಾ ನೀತಿ ಸಂಹಿತೆ ಜಾರಿ

ಇರುವುದರಿಂದ ಜನರಿಗೆ ಊಟ ಹಾಕಿಸಲಾಗುತ್ತಿಲ್ಲ. ಮತ್ತೆ ಚುನಾವಣೆ ಮುಗಿದ ಬಳಿಕ ದೇವಾಲಯಕ್ಕೆ ಬರುವುದಾಗಿ ತಿಳಿಸಿದರು. ಇದೇ ವೇಳೆ ಚುನಾವಣೆ ಎಂಬುದು ಜನರ ತೀರ್ಮಾನ. ಅವರಿಗೆ ಇಷ್ಟವಾದ ಅಭ್ಯರ್ಥಿಗಳಿಗೆ ಮತ ಚಲಾಯಿಸುತ್ತಾರೆ ಎಂದರು. ಚಲನಚಿತ್ರ ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್ ,ನಟರಾದ ಗುರುದತ್ ಮುಂತಾದವರು ಶಿವಣ್ಣ ಅವರಿಗೆ ಸಾಥ್ ನೀಡಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here