ಇದು ಕುಂದಾಪುರ ತಾಲ್ಲೂಕಿನ ಮನಮೋಹಕ ಮರವಂತೆಯ ತೀರದಲ್ಲಿ ಕಡಲಬ್ಬರಿಸಿದ್ದು ಏಕಾಏಕಿ ಅಬ್ಬರಿಸಿ ನಿಂತ ಅರಬ್ಬೀ ಸಮುದ್ರ. ದೈತ್ಯ ಅಲೆಗಳ
ಆರ್ಭಟಕ್ಕೆ ಮರವಂತೆ ನಲುಗಿಹೋಗಿದೆ

ಈ ವೀಡಿಯೋ ನೋಡಿ ????ಮುಂದೆ ಸುದ್ದಿ ಓದಿ

ಇಂದು ಕರಾವಳಿಯ ಕುಂದಾಪುರ ಬಳಿಯ ಮರವಂತೆ ಬೀಚ್ ಇದ್ದಕ್ಕಿದ್ದಂತೆ ಉಕ್ಕಿದ್ದು ಕೆಲಕ್ಷಣಗಳ ಕಾಲ ಪ್ರವಾಹದ ರೀತಿಯ ವಾತಾವರಣ ಸೃಷ್ಟಿಸಿದೆ. ಇದ್ದಕ್ಕಿದ್ದ ಹಾಗೆ ಬಹು ಜೋರಾಗಿ ಸಮುದ್ರ ತೀರಕ್ಕೆ ಅಪ್ಪಳಿಸಿದ ಬೃಹತ್ ಪ್ರಮಾಣದ ಅಲೆಗಳಿಂದ ರಸ್ತೆಗಳು ಹಾಗೂ ಕಟ್ಟೆಗಳು ಒಡೆದು ಹೋಗಿವೆ.
ಏಕಾಏಕಿ ಸುನಾಮಿಯ‌ ಭೀತಿಯ ಹಾಗೆ ಬಂದ ಅಲೆಗಳಿಗೆ ಸ್ಥಳೀಯ ಮೀನುಗಾರರು ಕೂಡ ತಬ್ಬಿಬ್ಬಾಗಿದ್ದು ಕೂಡಲೇ ಎಚ್ಚೆತ್ತುಕೊಂಡ ದೂರ ಓಡಿದ್ದಾರೆ. ಸಮುದ್ರದ ಅಲೆಗಳ ಅಬ್ಬರಕ್ಕೆ ರಸ್ತೆಗಳು ಬಿರುಕು ಬಿಟ್ಟಿದ್ದು ಚೆಲ್ಲಾ ಪಿಲ್ಲಿಯಾಗಿದೆ
ಅರಬ್ಬೀ ಸಮುದ್ರ ಕ್ಷಣಕಾಲ ರೌದ್ರವತಾರ ತಾಳಿದ್ದಕ್ಕೆ ಹವಾಮಾನ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲವಾದರೂ ಈ ರೀತಿಯ ದೈತ್ಯ ಅಲೆಗಳಿಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಇನ್ನು ಎರಡು ಮೂರು ದಿನಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಿರುವುದು ಒಳ್ಳೆಯದುುು….. ಆದರೆ ಚುನಾವಣಾ ಬ್ಯುಸಿಯಲ್ಲಿರುವ ಅಧಿಕಾರಿಗಳಾಗಲಿ , ರಾಜಕೀಯ ವ್ಯಕ್ತಿಗಳಾಗಲಿ ಈ ಬಗ್ಗೆ ಗಮನ ಹರಿಸಿಲ್ಲ್ಲ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here