ವಿಶ್ವದಲ್ಲೆಡೆ ಹಬ್ಬುತ್ತಿರುವ ಕರೋನ ಮಹಾಮಾರಿಗೆ ಎಲ್ಲಾ ದೇಶಗಳು ತತ್ತರಿಸಿಹೋಗಿದೆ. ನಮ್ಮ ಭಾರತ ದೇಶದಲ್ಲಿ ಸಹ ಕೋರೋನ ಮಹಾಮಾರಿ ದಿನೇ ದಿನೇ ಹೆಚ್ಚಾಗುತ್ತಿದ್ದು ರಾಜ್ಯಸರ್ಕಾರ ಕೊರೊನ ಮಹಾಮಾರಿ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು  ಮಾರ್ಚ್ 31ರ ತನಕ ಪ್ರಸ್ತುತ ಇರುವ ಸ್ಥಿತಿಯನ್ನೇ ಮುಂದುವರೆಸಲು ನಿರ್ಧರಿಸಿದೆ. ಮಾರ್ಚ್ 31ರವರೆಗೂ ಕರ್ನಾಟಕ ಬಂದ್​ ಮುಂದುವರಿಯಲಿದೆ. ಮಾಲ್, ಥಿಯೇಟರ್, ಸಾರ್ವಜನಿಕ ಸಭೆಗಳು ಸೇರಿದಂತೆ  ಎಲ್ಲವೂ ಬಂದ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಇಂದು ನಡೆದ ವಿಧಾನಸಭೆ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈ ವಿಷಯ ಪ್ರಕಟಿಸಿದ್ದಾರೆ.

 

 

ಚೀನಾದಲ್ಲಿ 3,200 ಜನರನ್ನು ಹಾಗೂ ವಿಶ್ವದಾದ್ಯಂತ ಸುಮಾರು 8,000 ಜನರನ್ನು ಬಲಿ ಪಡೆದ ಕೊರೋನಾ ವೈರಸ್ ಭಾರತದಲ್ಲೂ ತನ್ನ ಅಟ್ಟಹಾಸ ಮುಂದುವರಿಸಿದೆ. ಈಗಾಗಲೇ ಭಾರತದಲ್ಲಿ ಮೂವರು ಸಾವನ್ನಪ್ಪಿದ್ದು, 147 ಜನರು ಸೋಂಕಿತರಾಗಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಒಂದು ವಾರ ಬಂದ್ ಘೋಷಿಸಲಾಗಿತ್ತು. ಕೊರೋನಾ ಹರಡುವಿಕೆ ತಹಬಂದಿಗೆ ಬರದ ಕಾರಣ ಬಂದ್ ಕಾಲಾವಧಿಯನ್ನು ಮತ್ತೂ ಒಂದು ವಾರ ಮುಂದುವರೆಸಲು ಸಿಎಂ ಬಿಎಸ್​ ಯಡಿಯೂರಪ್ಪ ಸೂಚನೆ ಹೊರಡಿಸಿದ್ದಾರೆ .

ಸದ್ಯ ಕೊರೊನ ಹಬ್ಬುತ್ತಿರುವ ಪರಿಸ್ಥಿತಿಯಲ್ಲಿ ನಾವು ರಾಜ್ಯದಲ್ಲಿ ಎಚ್ಚರಿಕೆ ವಹಿಸುವ ಅಗತ್ಯ ಇದ್ದು ಕಳೆದ ಒಂದು ವಾರದಿಂದ ಇರುವಂತೆ ಮತ್ತೊಂದು ವಾರ  ಮುಂದುವರಿಯಬೇಕಿದ್ದು  ಮಾರ್ಚ್ 31ರ ತನಕ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವಂತೆ ಎಲ್ಲರಿಗೂ ಸೂಚಿಸಿದ್ದೇನೆ ಎಂದು ಬಿಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here