ರಂಗಭೂಮಿಯ ಪ್ರತಿಭಾನ್ವಿತ ಕಲಾವಿದ, ಚಿತ್ರ ನಟ, ಮಾಸ್ಟರ್ ಹಿರಣ್ಣಯ್ಯನವರು ಇಂದು ಎಲ್ಲರನ್ನು ಅಗಲಿದ್ದಾರೆ. ನಾಟಕ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮುದ್ರಿಸಿರುವ ಕಲಾವಿದ ಮಾಸ್ಟರ್ ಹಿರಣ್ಣಯ್ಯನವರು. ನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು ಇಹಲೋಕ ತ್ಯಜಿಸಿ ಹೋಗಿದ್ದಾರೆ. ಹಿರಣ್ಣಯ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ತಮ್ಮ ಮಕ್ಕಳಿಗೆ ತನ್ನ ಪಾರ್ಥಿವ ಶರೀರವನ್ನು ಹೆಚ್ಚು ಹೊತ್ತು ಇಡಬೇಡಿ ಎಂದು ಹೇಳಿದ್ದರಂತೆ. ಅದಕ್ಕೆ ಅವರ ಅಂತಿಮ ಇಚ್ಛೆಯನ್ನು ಪೂರ್ಣಗೊಳಿಸಲು ಅವರ ಮಕ್ಕಳು ಆದಷ್ಟು ಬೇಗ ಅಂತ್ಯ ಕ್ರಿಯೆಯ ಕಾರ್ಯಗಳನ್ನು ನಿರ್ವಹಿಸಲು ತೀರ್ಮಾನಿಸಿದ್ದಾರೆ.

ಈಗಾಗಲೇ ಅಂತ್ಯ ಕ್ರಿಯೆ ಸಿದ್ಧತೆಗಳು ನಡೆಯುತ್ತಿದ್ದು ಅವರ ಮನೆಯ ಬಳಿ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗುವುದು ಎಂದು ತಿಳಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡುವ ಬಗ್ಗೆ ಕುಟುಂಬ ವರ್ಗ ಇನ್ನೂ ಯಾವುದೇ ನಿರ್ಣಯವನ್ನು ಕೈಗೊಂಡಿಲ್ಲ. ಸಂಜೆಯ ವೇಳೆಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ಅವರ ಕುಟುಂಬ ವರ್ಗ ನಿರ್ಧರಿಸಿದೆ. ಹಿರಣ್ಣಯ್ಯನವರು ನಿಧನರಾಗಿರುವುದು ನಾಡಿಗೆ ಒಂದು ನಷ್ಟ.

ರಂಗಭೂಮಿಯಲ್ಲಿ ಅವರು ಮಾಡಿರುವ ಸಾಧನೆ ಅದ್ವಿತೀಯವಾದುದು. ನಾಡು ಕಂಡ ಪ್ರತಿಭಾನ್ವಿತ ಕಲಾವಿದರಲ್ಲಿ ಮಾಸ್ಟರ್ ಹಿರಣ್ಣಯ್ಯನವರು ಒಂದು ಶಾಶ್ವತವಾದ ಸ್ಥಾನವನ್ನು ಪಡೆದಿದ್ದರು. ಅವರು ಪಡೆದ ಪ್ರಶಸ್ತಿ ಹಾಗೂ ಪುರಸ್ಕಾರಗಳು ಅನೇಕ. ನಾಟಕಗಳ ಮೂಲಕ ರಾಜಕೀಯ ವಲಯದ ತಪ್ಪುಗಳನ್ನು ಬೆರಳು ಮಾಡಿ ತೋರಿಸಿ , ಮನರಂಜನೆಯ ಮೂಲಕವೇ ವೈಚಾರಿಕತೆಗೆ ಜನರನ್ನು ತೊಡಗಿಸಿದ ಕಲಾವಿದ ಮಾಸ್ಟರ್ ಹಿರಣ್ಣಯ್ಯನವರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here