ಮತ್ತೆ ಉಧ್ಬವ ಚಿತ್ರದ ಸಂಪೂರ್ಣ ವಿಮರ್ಶೆ ಇಲ್ಲಿದೆ ನೋಡಿ . 2020.ರಲ್ಲಿ ಬಿಡುಗಡೆಯಾಗಿರುವ ಚಿತ್ರಗಳ ಪೈಕಿಯಲ್ಲಿ ಪ್ರಮೋದ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ” ಮತ್ತೆ ಉದ್ಭವ ” ಚಿತ್ರ ಮೋಸ್ಟ್ ಎಂಟರ್ಟೇನಿಂಗ್ ಚಿತ್ರ ಎಂದು ಹೇಳಬಹುದು. ಜೀವನದ ಚಿಂತೆಯ ನಡುವೆ ಮನರಂಜನೆಯ ಆಶಾಕಿರಣಕ್ಕಾಗಿ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ” ಮತ್ತೆ ಉದ್ಭವ ” ಚಿತ್ರ ಜೀವನದ ಜಂಜಾಟವನ್ನು ಮರೆಸಿ ಮನರಂಜನೆಯ ಭರಪೂರ ಭೋಜನವನ್ನೇ ಉಣಬಡಿಸುತ್ತದೆ.


ನಾಯಕ ನಟ ಪ್ರಮೋದ್ ನಟನೆ ಯಾವ ಅನುಭವಿ ಕಲಾವಿದನಿಗೂ ಕಮ್ಮಿಯಿಲ್ಲದಂತಿದೆ. ಅವರ ಪಾತ್ರದ ಚಾಣಾಕ್ಷತನ ಯಾವುದೇ ಬಗೆಯ ವೀಕ್ಷಕನಿಗೂ ಇಷ್ಟ ಆಗಿಯೇ ಆಗುತ್ತದೆ. ಅಲ್ಲದೇ ಈ ಪಾತ್ರ ಪ್ರಮೋದ್ ರವರಿಗೆ ಖ್ಯಾತಿ ತಂದರೂ ಅಚ್ಚರಿ ಪಡಬೇಕಾಗಿಲ್ಲ.
ಮಿಲನಾ ನಾಗರಾಜ್ ಚಿತ್ರದಲ್ಲಿ ಮಿಂಚಿದ್ದಾರೆ.
ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ವಿ.ಮನೋಹರ್ ರವರ ಮನೋಹರವಾದ ಸಂಗೀತ ಹಾಗೂ ಅದಕ್ಕೆ ಸರಿಸಾಟಿರಾದಂತಹ ಜಯಂತ್ ಕಾಯ್ಕಿಣಿ ರವರ ಮನಮುಟ್ಟುವ ಸಾಹಿತ್ಯ.
ಈ ಚಿತ್ರದ ಮೂಲಕ ವಿಂಟೇಜ್ ಸಂಗೀತ ಮಾಂತ್ರಿಕ ವಿ. ಮನೋಹರ್ ರವರು ಜಬರ್ದಸ್ತ್ ಕಮ್ ಬ್ಯಾಕ್ ಮಾಡಿದ್ದಾರೆನ್ನಬಹುದು.

ಚಿತ್ರದ ಪ್ರತಿಯೊಂದು ಫ್ರೇಮ್ ಕೂಡ ಕೊಡ್ಲು ರಾಮಕೃಷ್ಣರವರ ನಿರ್ದೇಶನದ ಛಾಪನ್ನು ನಮಗೆ ಪರಿಚಯ ಮಾಡಿಸಿಕೊಡುತ್ತದೆ. ಈ ಚಿತ್ರ ಪ್ರಮೋದ್ ರವರಿಗೆ ಹಿಂದೆಂದೂ ಸಿಗದಂತಹ ಖ್ಯಾತಿಯನ್ನು ನೀಡಬಹುದು ಯಾಕೆಂದರೆ ಈ ಚಿತ್ರದಲ್ಲಿ ಅವರು ನಿರ್ವಹಿಸಿರುವ ಪಾತ್ರ ಎಲ್ಲರ ಮನಸೆಳೆಯುತ್ತದೆ.ಮತ್ತೆ ಉದ್ಭವ ಚಿತ್ರಕ್ಕೆ ನಮ್ಮ ರೇಟಿಂಗ್ 4 ಸ್ಟಾರ್. ನೀವೂ ಕೂಡ ತಪ್ಪದೇ ಚಿತ್ರಮಂದಿರಗಳಲ್ಲಿ ಚಿತ್ರವನ್ನು ತಪ್ಪದೇ ವೀಕ್ಷಿಸಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here