ಚಂಡಿಗಢ/ಕುರುಕ್ಷೇತ್ರ, ಜ.15-ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಗ್ಯಾಂಗ್‍ರೇಪ್‍ನ ಬರ್ಬರ ಕೃತ್ಯವನ್ನು ನೆನಪಿರುವ ಭೀಕರ ಘಟನೆ ಹರಿಯಾಣದಲ್ಲಿ ನಡೆದಿದೆ. 15 ವರ್ಷದ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅತ್ಯಂತ ಕ್ರೂರವಾಗಿ ಕೊಂದಿರುವ ಘಟನೆ ಹರ್ಯಾಣದ ಜಿಂದ್‍ನಲ್ಲಿ ಜರುಗಿದೆ.

 

 

 ಜಿಂದ್‍ನ ನಫಿಡೋನ್ ಪಟ್ಟಣದ ಬುಧಖೇಡ ಗ್ರಾಮದ ಕಾಲುವೆ ಸಮೀಪ ಶುಕ್ರವಾರ ರಾತ್ರಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಗ್ಯಾಂಗ್‍ರೇಪ್‍ಗೆ ಒಳಗಾಗಿ ಕ್ರೂರ ರೀತಿಯಲ್ಲಿ ಹತ್ಯೆಗೀಡಾದ ಬಾಲಕಿಯನ್ನು ಕುರುಕ್ಷೇತ್ರದ ಝಾನ್ಸಾ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.ಜನವರಿ 9ರಂದು ನಾಪತ್ತೆಯಾಗಿದ್ದ ಬಾಲಕಿಗಾಗಿ ಪೋಷಕರು ಮತ್ತು ಗ್ರಾಮಸ್ಥರು ತೀವ್ರ ಹುಡುಕಾಟ ನಡೆಸಿದ್ದರು. ಕಾಲುವೆ ಬಳಿ ಬಾಲಕಿಯ ನಗ್ನ ಶವ ಪತ್ತೆಯಾಗಿದ್ದು, ಚಿತ್ರಹಿಂಸೆ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿ ನಿರ್ದಯವಾಗಿ ಕೊಲ್ಲಲಾಗಿದೆ. ನಿರ್ಭಯಾ ರೀತಿ ಆಕೆಯ ಖಾಸಗಿ ಭಾಗಗಳು ಮತ್ತು ಒಳ ಭಾಗಗಳನ್ನು ಛಿದ್ರಗೊಳಿಸಲಾಗಿದೆ. ಮುಖ, ಬಾಯಿ, ಕೈಗಳು, ಎದೆ ಸೇರಿದಂತೆ ವಿವಿಧೆಡೆ 20ಕ್ಕೂ ಹೆಚ್ಚು ಕಡೆ ತೀವ್ರ ಗಾಯಗಳಾಗಿವೆ.ಮೃತದೇಹವನ್ನು ರೋಹಟಕ್‍ನ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಬಾಲಕಿಯನ್ನು ನಾಲ್ಕೈದು ಜನರ ಗುಂಪು ಅಪಹರಿಸಿ ಈ ಘೋರ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥ ದತ್ತಾತ್ರೇಯ ತಿಳಿಸಿದ್ದಾರೆ.
ಹಂತಕರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಮುಂದುವರಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here