ಮಯನ್ಮಾರ್ ಗಡಿಯಲ್ಲಿನ ನಾಲ್ಕನೇ ಅಸ್ಸಾಂ ರೈಫಲ್ಸ್ ಯೂನಿಟ್ ಮೇಲೆ ಉಗ್ರರು ನಡೆಸಿದ ಧಾಳಿಯಲ್ಲಿ ಭಾರತದ ಮೂರು ಜನ ಯೋಧರು ಹುತಾತ್ಮರಾಗಿದ್ದಾರೆ. ಮ್ಯಾನ್ಮಾರ್‌ನ ಗಡಿಯ ಸಮೀಪದಲ್ಲಿ ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಈ ಘಟನೆಯು ನಡೆದಿದೆ. ಇಲ್ಲಿನ ಸ್ಥಳೀಯ ಗುಂಪಿನ ಪೀಪಲ್ಸ್ ಲಿಬರೇಶನ್ ಆರ್ಮಿಯ ಭಯೋತ್ಪಾದಕರು ಸಂಚನ್ನು ಹೂಡಿ ಭಾರತೀಯ ಯೋಧರ ಮೇಲೆ ಧಾಳಿಯನ್ನು ನಡೆಸಿದ್ದಾರೆ ಎನ್ನಲಾಗಿದರ. ಈ ದಾಳಿಯಲ್ಲಿ 4 ಅಸ್ಸಾಂ ರೈಫಲ್ಸ್ ಘಟಕದ ಮೂವರು ಭಾರತೀಯ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ.

ಅಲ್ಲದೇ ಉಳಿದಂತೆ ನಾಲ್ವರು ಯೋಧರು ಈ ಧಾಳಿಯ ವೇಳೆಯಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ‌ಗಡಿಯಲ್ಲಿ ಗಸ್ತಿನಲ್ಲಿ ಇದ್ದ ಭಾರತದ ಯೋಧರ ಮೇಲೆ ಧಾಳಿ ನಡೆಸಿದ ಭಯೋತ್ಪಾದಕರು, ಸೈನಿಕರ ಮೇಲೆ ಐಇಡಿಯನ್ನು ಸ್ಪೋಟ ಮಾಡಿದ್ದು, ಅನಂತರ ಅವರ ಮೇಲೆ ಗುಂಡಿನ ಧಾಳಿಯನ್ನು ನಡೆಸಿದ್ದಾರೆ ಎನ್ನಲಾಗಿದೆ. ‌ಈ ಧಾಳಿಯಲ್ಲಿ ಭಯೋತ್ಪಾದಕರ ಗುಂಡಿಗೆ ಮೂವರು ಯೋಧರು ಪ್ರಾಣವನ್ನು ತ್ಯಾಗ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here