ಮೆಕ್ಸಿಕೊಗೆ ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯಕ್ಕೆ ಹೆಸರಾಗಿದೆ‌ ಕಾಲಕಾಲಕ್ಕೆ, ಮೆಕ್ಸಿಕೊ ನಗರದಲ್ಲಿ ಕಾರುಗಳು, ಕೈಗಾರಿಕೆಗಳು ಮತ್ತು ಹತ್ತಿರದ ಜ್ವಾಲಾಮುಖಿಯ ಹೊಗೆಯಿಂದ ತೊಂದರೆಗೆ ಈಡಾಗಿದ್ದು, ಇಲ್ಲಿ ಹಲವರ ಪಾರ್ಶ್ವವಾಯುವಿಗೆ ಇದು ಕಾರಣವಾಗಿದೆ. ಈ ವಾಯುಮಾಲಿನ್ಯದ ವಿರುದ್ಧ ಹೋರಾಡಲು, ಎಂಜಿನಿಯರ್‌ಗಳ ಗುಂಪು ಒಂದು ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಬಯೋಮಿಟೆಕ್ ಎಂಬ ಕಂಪನಿಯು ರಚಿಸಿದ ಮತ್ತು ಬಯೋ ಅರ್ಬನ್ ಎಂದು ಕರೆಯಲ್ಪಡುವ ಯೋಜನೆಯಲ್ಲಿ ಒಂದು ರೀತಿಯ ಕೃತಕ ಮರವನ್ನು ಸೃಷ್ಟಿ ಮಾಡಲಾಗಿದೆ. ಅದು ಕೂಡಾ ಮರಗಳಂತೆ ಮಾಲಿನ್ಯವನ್ನು ಹೀರಿಕೊಳ್ಳುತ್ತದೆ ಮತ್ತು ಶುದ್ಧ ಗಾಳಿಯನ್ನು ನೀಡುತ್ತದೆ. ಈ ಆವಿಷ್ಕಾರವು ವಿಶೇಷವಾಗಿ ಮಾಲಿನ್ಯದಿಂದ ಬಳಲುತ್ತಿರುವವರಿಗೆ ಆಶಾದಾಯಕವಾಗಿದೆ: ಪಾದಚಾರಿಗಳು, ಹಿರಿಯ ನಾಗರಿಕರು ಮತ್ತು ಸೈಕ್ಲಿಸ್ಟ್‌ಗಳಿಗೆ ಇದು ಉಪಕಾರಿಯಾಗಲಿದೆ.

ಬಯೋಮಿಟೆಕ್‌ನ ಬಯೋಅರ್ಬನ್ ರೊಬೊಟಿಕ್ ಮರವು ಮಾಲಿನ್ಯವನ್ನು ತಡೆದು, ಉಸಿರಾಡಲು ಅಗತ್ಯವಾದ ಗಾಳಿಯನ್ನು ನೀಡಲು ಸಮರ್ಥವಾಗಿದೆ ಮತ್ತು ತಂತ್ರಜ್ಞಾನದ ಬಳಕೆಯ ಮೂಲಕ ಮರವು ಗಾಳಿಯ ನೈಸರ್ಗಿಕ ಪ್ರಕ್ರಿಯೆಯಂತೆಯೇ ಶುದ್ಧಗೊಳಿಸುತ್ತದೆ. ಲೋಹೀಯ ರಚನೆಯನ್ನು ಒಳಗೊಂಡಿರುವ ಈ ಮರವು ಸೂಕ್ಷ್ಮ ಪಾಚಿಗಳ ಮೂಲಕ ಮಾಲಿನ್ಯಮಯ ಗಾಳಿಯನ್ನು ಹಿಡಿದು ಮತ್ತು ಶುದ್ಧ ಗಾಳಿಯನ್ನು ನಮಗೆ ನೀಡಲು ದ್ಯುತಿಸಂಶ್ಲೇಷಣೆ ಪ್ರಕ್ರಿಯೆಯನ್ನು ವರ್ಷಕ್ಕೆ 365 ದಿನಗಳೂ ನಡೆಸುತ್ತದೆ. ಅದರ ಸೃಷ್ಟಿಕರ್ತರ ಪ್ರಕಾರ, ಒಂದು ಬಯೋ ಅರ್ಬನ್ ರೊಬೊಟಿಕ್ ಮರವು 368 ನೈಜ ಮರಗಳ ಕೆಲಸವನ್ನು ಮಾಡುವ ಸಾಮರ್ಥ್ಯ ಹೊಂದಿದೆ.

ಈ ಭರವಸೆಯ ಕೃತಕ ಮರದ ಎತ್ತರ, ನಾಲ್ಕು ಮೀಟರ್ ಆಗಿದ್ದಯ, ನಿಸರ್ಗದತ್ತ ಮರಗಳನ್ನು ಬದಲಿಸಲು ಪ್ರಯತ್ನಿಸುವುದಿಲ್ಲವಾದರೂ, ಅವುಗಳಿಗೆ ಪೂರಕವಾಗಿದೆ. ಹೆಚ್ಚಿನ ಪಾದಚಾರಿಗಳ ಸಂಚಾರ, ವಾಹನಗಳು, ಸೈಕ್ಲಿಸ್ಟ್‌ಗಳು ಮತ್ತು ಸಾರ್ವಜನಿಕ ಸಾರಿಗೆಯಿರುವ ಕಡೆ, ಹೆಚ್ಚಿನ ನಗರ ಸ್ಥಳಗಳಲ್ಲಿ ಇದನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈಗ ಮೊದಲನೆಯದನ್ನು ಪ್ಯೂಬ್ಲಾ, ಮೆಕ್ಸಿಕೊದಲ್ಲಿ ಸ್ಥಾಪಿಸಲಾಗಿದೆ ಮತ್ತು ಮುಂದೆ ಇದರ ನಿರ್ಮಾಣ ವೆಚ್ಚ ಬದಲಾಗಬಹುದು. ಸದ್ಯಕ್ಕೆ ಅದಕ್ಕೆ USD $ 50.000 ರಷ್ಟು ವೆಚ್ಚವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here